51ನೇ ವಯಸ್ಸಿನಲ್ಲಿ ಮತ್ತೆ ತಂದೆಯಾಗುವ ಖುಷಿಯಲ್ಲಿ ಸಂಸದ ಮನೋಜ್ ತಿವಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ , ರಾಜಕಾರಣಿ ಮನೋಜ್ ತಿವಾರಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.ತಮ್ಮ 51ನೇ ವಯಸ್ಸಿನಲ್ಲಿ ಮತ್ತೆ ತಂದೆಯಾಗಲಿದ್ದಾರೆ.
ಮನೋಜ್ ಹಾಗೂ ಅವರ ಪತ್ನಿ ಸುರಭಿ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೀಮಂತ ಕಾರ್ಯಕ್ರಮದ ಫೋಟೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್‌ದಲ್ಲಿ ಸೀಮಂತ ಕಾರ್ಯಕ್ರಮದ ವಿಡಿಯೋವನ್ನು ಮನೋಜ್ ಪೋಸ್ಟ್ ಮಾಡಿದ್ದಾರೆ. ಗರ್ಭಿಣಿಯಾಗಿರುವ ತಮ್ಮ ಪತ್ನಿ ಮತ್ತು ಮಗಳು ಸಾನ್ವಿಕಾ ಜತೆ ಮನೋಜ್ ಇರುವ ಚಿತ್ರಗಳಿವೆ. ಅಲ್ಲದೇ, ನಾವು ಕೆಲವು ಸಂತೋಷಗಳನ್ನು ಪದಗಳಲ್ಲಿ ಹೇಳಲು ಆಗುವುದಿಲ್ಲ. ಅದನ್ನು ಅನುಭವಿಸಬೇಕಷ್ಟೇ ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!