ಜೆಡಿಎಸ್ ಶಾಸಕರ ಮೇಲೆ ವಾಗ್ದಾಳಿ ನಡೆಸುವ ಸಂಸದೆ ಸುಮಲತಾ ಬೇರೇನೂ ಮಾಡುತ್ತಿಲ್ಲ: ಪುಟ್ಟರಾಜು ಕಿಡಿ

ಹೊಸದಿಗಂತ ವರದಿ,ಮಂಡ್ಯ :

ಕೇವಲ ದಿಶಾ ಸಭೆ ಮಾಡಿ ಜೆಡಿಎಸ್ ಶಾಸಕರ ವಿರುದ್ಧ ವಾಗ್ದಾಳಿ ನಡೆಸುವುದನ್ನು ಬಿಟ್ಟು ಸಂಸದೆ ಸುಮಲತಾ ಬೇರೇನೂ ಮಾಡುತ್ತಿಲ್ಲ ಎಂದು ಶಾಸಕ ಸಿ.ಎಸ್. ಪುಟ್ಟರಾಜು ಕಿಡಿಕಾರಿದರು.
ತಾಲೂಕಿನ ದುದ್ದ ಹೋಬಳಿಯ ಚಂದಗಾಲು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಚಂದಗಾಲು-ತಂಡಸನಹಳ್ಳಿ ಮಾರ್ಗವಾಗಿ 3 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ನರೇಗಾ ಯೋಜನೆಯಲ್ಲಿ ಮಂಡ್ಯ ಜಿಲ್ಲೆ ಕಡೇ ಸ್ಥಾನದಲ್ಲಿದ್ದುಘಿ, ಸಂಸದೆ ಸುಮಲತಾ ಯಾವುದೇ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲಘಿ. ನರೇಗಾ ಯೋಜನೆಯಡಿ ಒಂದೊಂದು ಪಂಚಾಯಿತಿಯಲ್ಲಿ 10 ಕೋಟಿ ಕೆಲಸ ಮಾಡುವಂತಹ ಅವಕಾಶಗಳಿವೆ. ನಾನೂ ಸಹ ನಾಲ್ಕು ವರ್ಷಗಳ ಕಾಲ ಸಂಸದನಾಗಿ ಕೆಲಸ ಮಾಡಿದ್ದೆಘಿ. ಕೇಂದ್ರದಿಂದ ಹಣ ತಂದು ಯಾವ ರೀತಿ ಕೆಲಸ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದೇನೆ. ಆದರೆ ಸುಮಲತಾ ಅವರು ಯಾವುದೇ ಕೆಲಸ ಮಾಡದೆ ಕೇವಲ ಗೊಂದಲ ಮೂಡಿಸುತ್ತಿದ್ದಾರೆ ಎಂದು ಟೀಕಿಸಿದರು.
ಇನ್ನಾದರೂ ಕೀಳು ಮಟ್ಟದ ರಾಜಕೀಯ, ಜೆಡಿಎಸ್ ಶಾಸಕರನ್ನು ಟೀಕಿಸುವುದನ್ನು ಬಿಟ್ಟು ಅಭಿವೃದ್ಧಿ ಕಾರ‌್ಯಗಳನ್ನು ಮಾಡಿ ಜಿಲ್ಲೆಗೆ ಹೆಸರು ತರುವ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.
ಬಿಜೆಪಿ ವಿರುದ್ಧ ವಾಗ್ದಾಳಿ :
ನನ್ನ 40 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಕೆಟ್ಟ ವ್ಯವಸ್ಥೆ ನೋಡಿರಲಿಲ್ಲಘಿ. ಇಂತಹ ಬೇಜವಾಬ್ದಾರಿ ಸರ್ಕಾರ ಹಾಗೂ ಬೇಜವಾಬ್ದಾರಿ ಮಂತ್ರಿಗಳನ್ನು ನಾನು ನೋಡಿರಲಿಲ್ಲಘಿ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಒಂದು ವರ್ಷವಾದರೂ ಉಸ್ತುವಾರಿ ಸಚಿವ ಗೋಪಾಲಯ್ಯ ಕಚೇರಿ ತೆರೆದಿಲ್ಲಘಿ. ಈ ಸರ್ಕಾರದಲ್ಲಿ ಅಭಿವೃದ್ಧಿ ವಿಚಾರ ಇಲ್ಲವೇ ಇಲ್ಲಘಿ. ನಾರಾಯಣಗೌಡ ಪ್ರತಿನಿಧಿಸುವ ಕೆ.ಆರ್. ಪೇಟೆ ಹೊರತುಪಡಿಸಿ ಉಳಿದ ಕ್ಷೇತ್ರಗಳು ಗೋಪಾಲಯ್ಯ ಅವರಿಗೆ ಕಾಣುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಿವರಾಮೇಗೌಡರಿಗೆ ತಿರುಗೇಟು :
ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡರು ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೋ ಛಿದ್ರವಾಗಲಿದೆ ಎಂದು ಹೇಳಿದ್ದಾರೆ. ಇದನ್ನು ಶಿವರಾಮೇಗೌಡ ಹೇಳುವುದರಿಂದ ಅದು ಸಾಭೀತಾಗುವುದಿಲ್ಲಘಿ. ಮಂಡ್ಯ ಜಿಲ್ಲೆಯ ಜನತೆ ಕಳೆದ ಬಾರಿ ಏಳಕ್ಕೆ ಏಳೂ ಜೆಡಿಎಸ್ ಶಾಸಕರನ್ನು ಗೆಲ್ಲಿಸಿಕೊಟ್ಟಿದ್ದರು. ಅದೇ ರೀತಿ ಮತ್ತೊಮ್ಮೆ ಜನ ಆಶೀರ್ವಾದ ಮಾಡಿ ಕೊಡುತ್ತಾರೆ. ಅದು ಜನರ ತೀರ್ಮಾನ ಶಿವರಾಮೇಗೌಡ ಹೇಳುವುದರಿಂದ ತೀರ್ಮಾನವಾಗುವುದಿಲ್ಲ ಎಂದು ಅವರಿಗೆ ತಿರುಗೇಟು ನೀಡಿದರು.
ಮಳೆಯಿಂದಾಗಿ ಸಾಕಷ್ಟು ಹಾನಿಯುಂಟಾಗಿತ್ತುಘಿ. ಮಾರಚಾಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಸಮಸ್ಯೆಗಳಿತ್ತು. ಅದನ್ನು ಪಟ್ಟಿ ಮಾಡಿ ಎಲ್ಲವನ್ನೂ ಸರಿಪಡಿಸುವ ಕಾರ‌್ಯ ಮಾಡುತ್ತಿದ್ದೇವೆ. ಹಂತ ಹಂತವಾಗಿ ಅಭಿವೃದ್ಧಿ ಕಾರ‌್ಯವನ್ನು ಮಾಡುತ್ತೇನೆ. ಜನರ ಸಮಸ್ಯೆಗೆ ತಕ್ಷಣವೇ ಸ್ಪಂಧಿಸಿ ಕೆಲಸ ಮಾಡುತ್ತೇನೆ. ಈಗಾಗಲೇ ವಡ್ಡರಹಳ್ಳಿಕೊಪ್ಪಲು, ಕುರಿಕೊಪ್ಪಲು ಗ್ರಾಮದ ಅಭಿವೃದ್ಧಿಗೂ ಚಾಲನೆ ನೀಡಿದ್ದೇನೆ ಎಂದು ಹೇಳಿದರು.
ಜೆಡಿಎಸ್ ಮುಖಂಡ ಚಂದಗಾಲು ಶ್ರೀಧರ್, ವಿಜಯಕುಮಾರ್, ತಮ್ಮಣ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪವಿತ್ರಾ ಶಿವಕುಮಾರ್, ಸದಸ್ಯರಾದ ನಿರಂಜನ್, ಸಿದ್ದರಾಜು, ಸಂತೋಷ್, ಇಂಜಿನಿಯರ್ ಲೋಕೇಶ್, ಜಗದೀಶ್, ಗುತ್ತಿಗೆದಾರ ರಾಘವೇಂದ್ರಘಿ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!