ಸಂಸದರು ಗರ್ಭಗುಡಿಯ ಮೂರ್ತಿಗಳಿದ್ದಂತೆ, ಯಾವುದೇ ತರಹದ ಶಕ್ತಿಯಿಲ್ಲ: ವಿವಾದ ಹುಟ್ಟು ಹಾಕಿದ ರಾಹುಲ್ ಗಾಂಧಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಸದರು ಅಂದ್ರೆ ಗರ್ಭಗುಡಿಯಲ್ಲಿರುವ ಮೂರ್ತಿಗಳಿದ್ದಂತೆ ಅವರಿಗೆ ಯಾವುದೇ ತರಹದ ಶಕ್ತಿಯಿಲ್ಲ ಎಂದು ಎಂದು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಹೊಸ ವಿವಾದ ಹುಟ್ಟು ಹಾಕಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆ ಮೇಲಿನ ಚರ್ಚೆ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್​ , ಜಾತಿ ಗಣತಿಯ ವಿಚಾರಕ್ಕೆ ಬಂದರೆ ಕೇಂದ್ರ ಸರ್ಕಾರ ವಿಚಲಿತರಾಗಿ ಪ್ರತಿಬಾರಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ಸಂಸದರಿಗೆ ನಿರ್ಧಾರ ತೆಗೆದುಕೊಳ್ಳುವ ಅಥವಾ ಕಾನೂನು ರಚನೆಯಲ್ಲಿ ಭಾಗವಹಿಸುವ ಯಾವುದೇ ಅವಕಾಶವಿಲ್ಲ. ಬಿಜೆಪಿ ಒಂದೇ ಅಲ್ಲಾ ಎಲ್ಲಾ ಪಕ್ಷದ ಸಂಸದರನ್ನು ದೇವರ ಮೂರ್ತಿಗಳಂತೆ ಪ್ರತಿಷ್ಠಾಪಿಸಲಾಗಿದೆ. ಮುಖ್ಯವಾಗಿ ಒಬಿಸಿ ಸಂಸದರನ್ನು ಗರ್ಭಗುಡಿಯಲ್ಲಿನ ದೇವರ ಮೂರ್ತಿಗಳಂತೆ ಪ್ರತಿಷ್ಟಾಪಿಸಲಾಗಿದ್ದು, ಅವರಿಗೆ ಯಾವುದೇ ತರಹದ ಅಧಿಕಾರವನ್ನು ಕೊಟ್ಟಿಲ್ಲ. ಈ ಬಗ್ಗೆ ನಾನು ಸಂಸತ್ತಿನಲ್ಲಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದೇನೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಹೇಳಿಕೆಯೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಬಿಜೆಪಿ ನಾಯಕರು ರಾಹುಲ್​ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್​ನವರು ಈ ರೀತಿ ಹೇಳಿಕೆಗಳನ್ನು ನೀಡುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!