Monday, October 2, 2023

Latest Posts

 ಸಂಸತ್ತಿನ ಅಧಿವೇಶನಕ್ಕೂ ಮೊದಲು‌ ಹಳೆ ಸಂಸತ್ ಭವನದಲ್ಲಿ ಸಂಸದರ ಫೋಟೋಶೂಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಂಸತ್ತಿನ ಅಧಿವೇಶನಕ್ಕೂ ಮುನ್ನ ಹಳೆಯ ಸಂಸತ್‌ ಭವನದ ಮುಂದೆ ವರ್ಣರಂಜಿತ ಉಡುಗೆಯಲ್ಲಿ, ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಮಂಗಳವಾರ ಬೆಳಗ್ಗೆ ಫೋಟೋಶೂಟ್‌ನಲ್ಲಿ ಭಾಗವಹಿಸಿದರು.

ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಖರ್, ಲೋಕಸಭೆಯ ಅಧ್ಯಕ್ಷ ಓಂ ಬಿರ್ಲಾ ಮತ್ತು ಇತರ ಸಂಸದರು ಜಂಟಿ ಫೋಟೋ ಸೆಷನ್‌ನಲ್ಲಿ ಉಪಸ್ಥಿತರಿದ್ದರು.

ಇಂದಿನಿಂದ ನೂತನ ಸಂಸತ್ ಭವನದಲ್ಲಿ ಸದನದ ಕಲಾಪ ನಡೆಯಲಿದೆ. ಲೋಕಸಭೆಯ ಸಂಸದರ ಸಮ್ಮುಖದಲ್ಲಿ ಸೆಂಟ್ರಲ್ ಹಾಲ್ ಕಾರ್ಯಕ್ರಮಕ್ಕೆ ಹಳೆಯ ಸಂಸತ್ ಭವನದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಹಳೆ ಸಂಸತ್‌ ಭವನಕ್ಕೆ ಇಂದು ವಿದಾಯ ಹೇಳುವ ಸಮಯ ಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!