ಹೊಸದಿಗಂತ ಡಿಜಿಟಲ್ ಡೆಸ್ಕ್ :
ಉತ್ತರ ಪ್ರದೇಶದ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರನ್ನು ಟೀಂ ಇಂಡಿಯಾದ (Team India) ಆಟಗಾರ ಸೂರ್ಯ ಕುಮಾರ್ ಯಾದವ್ (Suryakumar Yadav ಲಕ್ನೋದ ಸಿಎಂ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 2ನೇ ಟಿ20 ಪಂದ್ಯ ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ (Atal Bihari Vajpayee Ekana Stadium) ಭಾನುವಾರ ನಡೆದಿತ್ತು. ಈ ಪಂದ್ಯವನ್ನು ಮೈದಾನಕ್ಕೆ ಬಂದು ವೀಕ್ಷಿಸಿದ್ದ ಯೋಗಿ ಆದಿತ್ಯನಾಥ್ ಟೀಂ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯಗೆ (Hardik Pandya) ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ್ದರು.
ಸೋಮವಾರ ಸೂರ್ಯಕುಮಾರ್ ಯಾದವ್ ಯೋಗಿ ಆದಿತ್ಯನಾಥ್ ಅವರ ಲಕ್ನೋದ ಸಿಎಂ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ಬಗ್ಗೆ ಯೋಗಿ ಆದಿತ್ಯನಾಥ್ ಫೋಟೋ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಯಂಗ್ & ಎನರ್ಜಿಟಿಕ್ ಸ್ಕೈ ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್ ಯಾದವ್ ಜೊತೆ ಎಂದು ಬರೆದುಕೊಂಡಿದ್ದಾರೆ.