ಪುತ್ತೂರು ವಾಹಿನಿ ಕಲಾ ಸಂಘದ ‘ಸಾಹಿತ್ಯ ಸಂಭ್ರಮ-23’

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪುತ್ತೂರು ವಾಹಿನಿ ಕಲಾ ಸಂಘದ ಸಾಹಿತ್ಯ ಸಂಭ್ರಮ-23 ಭಾನುವಾರ ಪುತ್ತೂರಿನ ಸುಭದ್ರ ಕಲ್ಯಾಣಮಂಟಪದಲ್ಲಿ ಜರುಗಿತು.

ಕಾಸರಗೋಡಿನ ಹಿರಿಯ ಸಾಹಿತಿ ಶ್ರೀ ಕೃಷ್ಣಯ್ಯ ಅನಂತಪುರ ಅಧ್ಯಕ್ಷತೆಯಲ್ಲಿ ನಡೆದ ಮಧುರಗಣಪನ ಮುಕ್ತಕಗಳು, ಬೆಳ್ಳಿರಥದ ಭಾವಯಾನ, ನಂದಿಗೇಶನ ಮುಕ್ತಕಗಳು ಹಾಗೂ ಭಾವ ಮೇಘಮಾಲೆ ಕೃತಿಗಳ ಬಿಡುಗಡೆ, ಸಾಧಕರಿಗೆ ಸನ್ಮಾನ ಹಾಗೂ ಹಾಸ್ಯ ಸಿಂಚನ ಕಾರ್ಯಕ್ರಮವನ್ನು ವಿಜಯಾ ಶಶಿಕಾಂತ್ ಉದ್ಘಾಟಿಸಿದರು.

ವಾಹಿನಿ ಕಲಾ ಸಂಫದ ಅಧ್ಯಕ್ಷ ಮಧುರಕಾನನ ಗಣಪತಿ ಭಟ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀ ಬಾಲ ಮಧುರಕಾನನ ಶುಭಾಶಂಸನೆಗೈದರು.
ವಿ.ಬಿ. ಆರ್ತಿಕಜೆ ಉಪಸ್ಥಿತಿಯಲ್ಲಿ ಮಧುರಕಾನನ ಗಣಪತಿ ಭಟ್, ಸಾನು ಉಬರಡ್ಕ, ಮತ್ತು ಗೋಪಾಲಕೃಷ್ಣ ಭಟ್ ಮನವಳಿಕೆ ಅವರ ಕೃತಿಗಳನ್ನು ಹರಿನರಸಿಂಹ ಉಪಾಧ್ಯಾಯ, ಡಾ. ಸುರೇಶ ನೆಗಳಗುಳಿ ಮತ್ತು ಅನುರಾಧ ಶಿವಪ್ರಕಾಶ್ ಪರಿಚಯ ಮಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ಮಾತನಾಡಿದ ಕವಿತಾ ಅಡೂರು, ಈ ಸಮ್ಮಾನಗಳು ಜವಾಬ್ದಾರಿಯನ್ನು ಹೆಚ್ಚಿಸುತ್ತವೆ ಎಂದರು. ತಾಲೂಕು ಕಸಾಪ ಅಧ್ಯಕ್ಷ ಉಮೇಶ್ ನಾಯಕ್ ಶುಭ ಹಾರೈಸಿದರು. ಪ್ರೊ. ಪಿ.ಎನ್ . ಮೂಡಿತ್ತಾಯರಿಂದ ಹಾಸ್ಯ ಸಿಂಚನ ಮೂಡಿಬಂತು. ಆಶಾ ಮಯ್ಯ, ಸುಮಾ ಕಿರಣ್ ಸಾನು ಉಬರಡ್ಕ, ಭಾರತಿ ಕೊಲ್ಲರಮಜಲು ನಿರೂಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!