ತಮ್ಮ ಗುರುಗಳನ್ನು ನೆನೆದು ಕಣ್ಣೀರಿಟ್ಟ ಅಭಿನವ ಶ್ರೀ

ಹೊಸದಿಗಂತ ವರದಿ ಕೊಪ್ಪಳ:

ಗವಿಮಠದ ಹಿಂದಿನ ಪೀಠಾಧಿಪತಿಗಳಾಗಿದ್ದ ಶ್ರೀ ಮರಿ ಶಾಂತವೀರ ಮಹಾಸ್ವಾಮಿಗಳು ಬಡ ಮಕ್ಕಳಿಗೆ ಉಚಿತ ಶಿಕ್ಷಣ ಎಷ್ಟು ಕಷ್ಟ ಅನುಭವಿಸಿದರು. ಊರೂರು ಸುತ್ತಿ ಭಿಕ್ಷಾಟನೆ ನಡೆಸಿ ಶಿಕ್ಷಣ ನೀಡಿದರು ಎಂದು ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳು ಗುರುಗಳನ್ನು ನೆನೆದು ಕಣ್ಣೀರು ಹಾಕಿದರು.

ಗುರುವಾರ ಗವಿಮಠದ ಆವರಣದಲ್ಲಿ ನಡೆದ ಶ್ರೀ ಮರಿಶಾಂತವೀರ ಮಹಾಸ್ವಾಮಿಗಳ ಪುಣ್ಯ ಸ್ಮರಣೆ ನಿಮಿತ್ತ ಐದು ಸಾವಿರ ವಿದ್ಯಾರ್ಥಿಗಳ ವಸತಿ ನಿಲಯದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಶ್ರೀ ಮರಿಶಾಂತವೀರ ಮಹಾಸ್ವಾಮಿಗಳು ಈ ಭಾಗದ ಮಕ್ಕಳಿಗೆ ಶಿಕ್ಷಣ ನೀಡಲು ಅನೇಕ ರೀತಿಯ ಕಷ್ಟಗಳನ್ನು ಅನುಭವಿಸಿದರು.ಊರೂರು ಸುತ್ತಿ ಭಿಕ್ಷಾಟನೆ ಮಾಡಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿದ್ದಾರೆ ಅದರ ಮುಂದಿನ ಭಾಗವನ್ನು ಶ್ರೀಮಠವು ನಡೆದುಕೊಂಡು ಹೋಗುತ್ತಿದೆ ಎಂದು ಹೇಳಿದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!