ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಜಾನ್ವಿ ಕಪೂರ್ ಹಾಗೂ ರಾಜ್‌ಕುಮಾರ್ ರಾವ್ ಅಭಿನಯದ ಮಿಸ್ಟರ್ ಆಂಡ್ ಮಿಸರ್ಸ್ ಮಾಹಿ ಸಿನಿಮಾ ನಿನ್ನೆಯಷ್ಟೇ ರಿಲೀಸ್ ಆಗಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರೂ ಫೀಲ್ ಗುಡ್ ಚಿತ್ರ ಎಂದು ಹೇಳಿದ್ದಾರೆ.
ಕ್ರಿಕೆಟರ್ ಆಗುವ ಆಸೆಯಿರುವ ಆವರೇಜ್ ಪ್ಲೇಯರ್ ಒಬ್ಬ ತನ್ನ ಪತ್ನಿಯನ್ನು ಕ್ರಿಕೆಟರ್ ಮಾಡಿ, ತಾನು ಕೋಚ್ ಆಗುತ್ತದೆ. ಈ ಮಧ್ಯೆ ಏನೆಲ್ಲಾ ಆಗುತ್ತದೆ, ಸೆಲೆಕ್ಷನ್ ಹೇಗೆ ಆಗುತ್ತದೆ ಇನ್ನಿತರ ಅಂಶಗಳು ಸಿನಿಮಾದಲ್ಲಿದೆ.
ಜಾನ್ವಿ ಹಾಗೂ ರಾಜ್‌ಕುಮಾರ್ ತಮ್ಮ ಪಾತ್ರಗಳಿಗೆ ನೂರಕ್ಕೆ ನೂರರಷ್ಟು ಜಸ್ಟಿಸ್ ನೀಡಿದ್ದು, ಜನರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ಈ ಸಿನಿಮಾ ಮೊದಲ ದಿನವೇ ಏಳು ಕೋಟಿ ರೂಪಾಯಿ ಕಮಾಯಿ ಮಾಡಿದ ಎನ್ನಲಾಗಿದೆ.