ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಿಸ್ ವರ್ಲ್ಡ್ ಸ್ಪರ್ಧೆಯಂತೆ ಮಿಸಸ್ ವರ್ಲ್ಡ್ ಸ್ಪರ್ಧೆ ಕೂಡ ಆಯೋಜನೆಗೊಳ್ಳುತ್ತದೆ. 2022ರ ಮಿಸಸ್ ಇಂಡಿಯಾ ವರ್ಲ್ಡ್ ಸ್ಪರ್ಧೆಯಲ್ಲಿ ನವದೀಪ್ ಕೌರ್ ಗೆ ಅತ್ಯುತ್ತಮ ರಾಷ್ಟ್ರೀಯ ಉಡುಪು ಪ್ರಶಸ್ತಿ ದೊರಕಿದೆ.
2021ರ ಮಿಸೆಸ್ ಇಂಡಿಯಾ ವರ್ಲ್ಡ್ ಆಗಿರುವ ಶ್ರೀಮತಿ ನವದೀಪ್ ಕೌರ್ ಅವರು ಮಿಸೆಸ್ ವರ್ಲ್ಡ್ 2022 ರ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.
ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನವದೀಪ್ ಕೌರ್ ಬೆಸ್ಟ್ ನ್ಯಾಷನಲ್ ಕಾಸ್ಟ್ಯೂಮ್ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಕಾಸ್ಟ್ಯೂಮ್ ರೌಂಡ್‌ನಲ್ಲಿ ಕುಂಡಲಿನಿ ಚಕ್ರದಂತೆ ಇರುವ ಉಡುಪು ಧರಿಸಿರುವ ಚಿತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ನವದೀಪ್ ಕೌರ್ ಅವರು ಮೂಲತಃ ಒಡಿಶಾದವರು. ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಮುಗಿಸಿದ ಅವರು ಎಂಬಿರ ಪದವಿಯನ್ನೂ ಪಡೆದಿದ್ದಾರೆ.
ಈಗ ಫ್ಯಾಷನ್ ಜಗತ್ತಿನಲ್ಲಿರುವ ನವದೀಪ್ ಸಮಾಜಮುಖಿ ಕೆಲಸಗಳನ್ನೂ ಮಾಡಿದ್ದಾರೆ. ಸುಮಾರು ಒಂದು ಸಾವಿರ ವಿದ್ಯಾರ್ಥಿಗಳ ಶಿಕ್ಷಣದ ಜವಾಬ್ದಾರಿ ಹೊತ್ತಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ವ್ಯಕ್ತಿತ್ವ ವಿಕಸನ ತರಗತಿಗಳನ್ನು ಅವರು ನಡೆಸುತ್ತಾರೆ.