ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಎಂಎಸ್ ಧೋನಿ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ವಿಶ್ವ ಕ್ರಿಕೆಟ್ ನಲ್ಲಿ ಬೆಸ್ಟ್ ಫಿನಿಶರ್ ಆಗಿ ಮಾತ್ರವಲ್ಲ, ಅತ್ಯುತ್ತಮ ನಾಯಕನಾಗಿಯೂ ಗುರುತಿಸಿಕೊಂಡಿದ್ದಾರೆ. ಮಹಿ ತಮ್ಮ ಆಟ ಮತ್ತು ನಾಯಕತ್ವದಿಂದ ಕ್ರಿಕೆಟ್‌ನಲ್ಲಿ ‘ಐಕಾನ್’ ಆಗಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ಮೂರು ವರ್ಷ ಕಳೆದರೂ ಮಹಿಯ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಕಾಲಕಾಲಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ.
ಎಂಎಸ್ ಧೋನಿ ತಮ್ಮ ಹೇರ್ ಸ್ಟೈಲ್‌ನಿಂದ ಹಲವಾರು ಅಭಿಮಾನಿಗಳನ್ನು ಗಳಿಸಿದ್ದಾರೆ. ಆಗಾಗ ಹೇರ್ ಸ್ಟೈಲ್ ಬದಲಾಯಿಸುವ ಧೋನಿ, ಇತ್ತೀಚೆಗಷ್ಟೇ ಮತ್ತೊಂದು ಹೊಸ ಹೇರ್ ಸ್ಟೈಲ್ ನೊಂದಿಗೆ ಕಾಣಿಸಿಕೊಂಡಿದ್ದಾರೆ. ತಮ್ಮ ವೃತ್ತಿಜೀವನದ ಆರಂಭದಲ್ಲಿ ಟಾರ್ಜನ್ ತರಹದ ಹೇರ್ ಸ್ಟೈಲ್‌ನೊಂದಿಗೆ ಕಾಣಿಸಿಕೊಂಡಿದ್ದ ಮಹಿ. ಒಂದು ಜಾಹೀರಾತು ಚಿತ್ರೀಕರಣಕ್ಕಾಗಿ ಧೋನಿ ಹೊಸದಾಗಿ ಕ್ಷೌರ ಮಾಡಿಸಿಕೊಂಡಿದ್ದಾರೆ. ಟಾಪ್ ಹೇರ್ ಸ್ಟೈಲಿಸ್ಟ್ ಅಲೀಮ್ ಹಕೀಮ್.. ಧೋನಿಗಾಗಿ ಹೊಸ ಹೇರ್ ಸ್ಟೈಲ್ ಮಾಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಹಕೀಮ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.
2007ರಲ್ಲಿ ತೆರೆಕಂಡ ‘ಅತಿಥಿ’ ಸಿನಿಮಾದ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಹೇರ್ ಸ್ಟೈಲ್ ಗೆ ಹೊಂದಿಕೊಂಡಂತೆ ಎಂಎಸ್ ಧೋನಿ ಅವರ ಹೇರ್ ಸ್ಟೈಲ್ ಇದೆ. ಮಹೇಶ್ ಹಾಗೂ ಧೋನಿ ಅವರನ್ನು ಹೋಲಿಕೆ ಮಾಡಲಾಗುತ್ತಿದೆ. ‘ಧೋನಿ ಭಾಯ್.. ಸೂಪರ್ ಹೇರ್ ಸ್ಟೈಲ್’, ‘ಮಹಿ ಭೈಯಾ ಹೇರ್ ಸ್ಟೈಲ್ ಅದ್ಭುತವಾಗಿದೆ’, ‘ಎಂಎಸ್ ಧೋನಿ.. ಮಹೇಶ್ ಬಾಬು ಡಾಮಿನೇಟ್ ಮಾಡುತ್ತಿದ್ದಾರೆ’ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.