ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಡಾ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ ತನಿಖೆ ಚುರುಕುಗೊಳಿಸಿದ್ದರೆ ಮತ್ತೊಂದೆಡೆ, ಲೋಕಾಯುಕ್ತ ತನಿಖೆಯ ಅಂತಿಮ ವರದಿ ಸಲ್ಲಿಕೆ ಮಾಡಲಾಗಿದೆ.
ಹಗರಣದ ಇಂಚಿಂಚೂ ತನಿಖೆ ನಡೆಸಿರುವ ಲೋಕಾಯುಕ್ತ ಪೊಲೀಸರು, ಐಜಿಪಿ ಸುಬ್ರಮಣ್ಯೇಶ್ವರ ರಾವ್ಗೆ ತನಿಖೆಯ ಅಂತಿಮ ವರದಿ ಸಲ್ಲಿಕೆ ಮಾಡಿದ್ದಾರೆ. ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್ ಸಲ್ಲಿಸಿರುವ ವರದಿಯಲ್ಲಿ ಕೆಲವು ಮಹತ್ವದ ಅಂಶಗಳನ್ನು ಉಲ್ಲೇಖ ಮಾಡಲಾಗಿದೆ.
550 ಪುಟಗಳ ವರದಿ ಸಲ್ಲಿಕೆ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು, 5 ಭಾಗಗಳಾಗಿ ವಿಂಗಡಣೆ ಮಾಡಿದ್ದಾರೆ.
ಕೆಲ ಅಧಿಕಾರಿಗಳು ನಿಯಮ ಗಾಳಿಗೆ ತೂರಿರುವುದು ಕಂಡು ಬಂದಿದೆ. ಮುಡಾದಲ್ಲಿ 14 ಸೈಟ್ ನೀಡುವ ಅವಶ್ಯಕತೆ ಇರಲಿಲ್ಲವೆಂದು ಉಲ್ಲೇಖ ಮಾಡಲಾಗಿದೆ. ಸೈಟ್ ನೀಡುವ ಅವಶ್ಯಕತೆ ಇಲ್ಲದೇ ಇದ್ರೂ ಸೈಟ್ ನೀಡಿರುವುದು ಕಂಡುಬಂದಿದೆ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಲೋಕಾಯುಕ್ತ ಪೊಲೀಸರು ಮಾಡಿರುವ ಐದು ವಿಭಾಗಗಳು ಯಾವುವು?
ದೇವರಾಜು ಜಮೀನು ಹೇಗೆ ಬಂತು ಎಂಬ ಹಿನ್ನೆಲೆಗಳ ಬಗ್ಗೆ.
ಡಿನೋಟಿಫಿಕೇಷನ್ ಹೇಗೆ ಆಯಿತು ಎಂಬುದು.
ಭೂ ಪರಿವರ್ತಣೆ ಹೇಗೆ ಆಯಿತು ಎಂಬ ವಿಚಾರ.
ಪಾರ್ವತಿಗೆ ಜಮೀನು ನೀಡಿರುವ ಬಗ್ಗೆ.
ಸೈಟ್ ವಾಪಸ್ ಕೊಟ್ಟಿರುವ ಬಗ್ಗೆ ಹಾಗೂ ನಂತರದ ಇತರೆ ಬೆಳವಣಿಗೆಗಳು.