ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ ವಿಚಾರಣೆಗೆ ನೀಡಲಾಗಿದ್ದ ಸಮನ್ಸ್ ರದ್ದುಪಡಿಸಿರುವುದರಿಂದ ನಮ್ಮ ಕೈ ಕಟ್ಟಿ ಹಾಕಿದಂತಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ತಿಳಿಸಿದೆ.
ಆರೋಪಿಗಳಿಗೆ ನೀಡಿದ್ದ ಸಮನ್ಸ್ ರದ್ದುಪಡಿಸಿರುವ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಇ.ಡಿ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಇ.ಡಿ ಪರ ಹೆಚ್ಚುವರಿ ಸಾಲಿಟಿರ್ ಜನರಲ್ ಎಸ್.ವಿ.ರಾಜು ವಾದ ಮಂಡಿಸಿ, ನಟೇಶ್‌ಗೆ ನೀಡಿದ್ದ ಸಮನ್ಸ್ ರದ್ದಾದ ಕಾರಣ ಆ ಆದೇಶದ ಮೇಲೆ ಈಗ ಪಾರ್ವತಿ ಅವರಿಗೆ ಸಮನ್ಸ್ ನೀಡಲು ಬರುವುದಿಲ್ಲ. ಇದರಿಂದ ಮುಂದಿನ ವಿಚಾರಣೆ ನಡೆಯಲು ಯಾವುದೇ ಅವಕಾಶಗಳು ಉಳಿದಿಲ್ಲ ಎಂದರು.
ಮುಂದಿನ ದಿನಗಳಲ್ಲಿ ಬೇರೆ ಆರೋಪಿಗಳು ಕೂಡ ನಟೇಶ್ ಪ್ರಕರಣ ಆಧರಿಸಿ ನ್ಯಾಯಾಲಯದಲ್ಲಿ ಲಾಭ ಪಡೆಯಲು ಅವಕಾಶ ನೀಡಿದಂತಾಗುತ್ತದೆ ಎಂದು ಎಸ್.ವಿ.ರಾಜು ಹೇಳಿದ್ದಾರೆ.