ಮುಡಾ ಹಗರಣ: ರಾಜ್ಯಕ್ಕೆ, ಕಾಂಗ್ರೆಸ್ ಪಕ್ಷಕ್ಕೆ ಒಂದು ಕಪ್ಪು ಚುಕ್ಕೆ: ಕೆ.ಎಸ್.ಈಶ್ವರಪ್ಪ

ಹೊಸದಿಗಂತ ಕಲಬುರಗಿ:

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮುಡಾ ಹಗರಣದ ಬೆಳೆವಣಿಗೆ ರಾಜ್ಯಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಒಂದು ಕಪ್ಪು ಚುಕ್ಕೆಯಾಗಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ನಗರದ ಐವನ್ ಶಾಹಿ ಅತಿಥಿ ಗೃಹದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ವಿಚಾರಣೆಗೆ ಹಾಜರಾಗುತ್ತಿರುವುದು ರಾಜ್ಯಜ ಇತಿಹಾಸದಲ್ಲೇ ಇದೆ ಮೊದಲು.ಈ ರೀತಿ ಆಗಬಾರದಿತ್ತು ಎಂದು ಹೇಳಿದರು.

ಮುಡಾ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಧೋರಣೆ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣದಂತಾಗಿದೆ.ಕಾಂಗ್ರೆಸ್ ಪಕ್ಷ ಯಾವತ್ತೂ ತಮ್ಮ ಮೇಲೆ ಕೆಸ್ ಬಿದ್ದಾಗ ರಾಜೀನಾಮೆ ಕೊಡುವುದಕ್ಕೆ ತಯಾರಾಗಿಲ್ಲ.ಆದರೆ, ಈ ಹಿಂದೆ ನನ್ನ ಮೇಲೆ ಆರೋಪ ಬಂದಾಗ ಇದೇ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನನ್ನ ರಾಜೀನಾಮೆಗೆ ಹೋರಾಟ ಮಾಡಿದ್ದೆ ಮಾಡಿದ್ದು.ಅದೇ ನಿಯಮ ಈಗ ನಿಮಗೆ ಲಾಗೂ ಆಗುವುದಿಲ್ಲವೇನೆಂದು ಪ್ರಶ್ನಿಸಿದ ಅವರು, ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ. ತಪ್ಪಿತಸ್ಥರು ಅಲ್ಲ ಅಂದ ಮೇಲೆ ಹೊರಗಡೆ ಬರಲಿ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಅವರ ಧರ್ಮಪತ್ನಿ ಪಾರ್ವತಿ ಅವರು ದೇವಸ್ಥಾನ ಬಿಟ್ಟು ಮನೆಯಿಂದ ಹೊರಗಡೆ ಬಂದಿದ್ದು,ಯಾರು ನೋಡೆ ಇಲ್ಲ. ಅಂತವಳ ಮೇಲೆ ಆರೋಪ ಬಂದಿದೆ.ಸಿಎಂ ಸಿದ್ದರಾಮಯ್ಯ ನಾನು ತಪ್ಪಿತಸ್ಥನಲ್ಲ ಅಂತ ನಾಟಕೀಯ ಮಾತುಗಳನ್ನು ಆಡಬಾರದು.ಈ ಪ್ರಕರಣದಲ್ಲಿ ಕ್ಲೀನ್ ಚಿಟ್ ತೆಗೆದುಕೊಂಡು ಮತ್ತೆ ಬನ್ನಿ ನಮ್ಮದೇನೂ ಅಭ್ಯಂತರವಿಲ್ಲ.ಆದರೆ, ಎಫ್ಐಆರ್ ಆದ ಮೇಲೂ ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ ಎಂದು ಭಂಡತನ ಪ್ರದರ್ಶನ ಮಾಡುತ್ತಿರುವುದು ಸರಿಯಲ್ಲ ಎಂದ ಅವರು, ಕೋರ್ಟ್ ತೀರ್ಪು ಮುಗಿಸಿ ಮುಕ್ತವಾಗಿ ಹೊರಬನ್ನಿ.ಆದರೆ, ಅಲ್ಲಿಯವರೆಗೆ ಮೊದಲು ರಾಜೀನಾಮೆ ಕೊಡಿ ಎಂದು ಹೇಳಿದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!