ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಡಾ ಹಗರಣ ಪ್ರಕರಣ ಸಂಬಂಧ ಲೋಕಾಯುಕ್ತ ಬಿ-ರಿಪೋರ್ಟ್ ಪ್ರಶ್ನಿಸಿ ಇಡಿ ಸಲ್ಲಿಸಿದ್ದ ತಕರಾರು ಅರ್ಜಿಯ ವಿಚಾರಣೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿಂದು ನಡೆಯಿತು.
ವಾದ-ಪ್ರತಿವಾದ ಆಲಿಸಿದ ಕೋರ್ಟ್ ಆದೇಶವನ್ನು ಏಪ್ರಿಲ್ 8ಕ್ಕೆ ಕಾಯ್ದಿರಿಸಿತು.
ಇಡಿ ಪರ ಹಿರಿಯ ವಕೀಲ ಮಧುಕರ್ ದೇಶಪಾಂಡೆ ವಾದ ಮಂಡನೆ ಮಾಡಿದರು. ಬಿ ರಿಪೋರ್ಟ್ ಚಾಲೆಂಜ್ ಮಾಡಲು ಇಡಿಗೆ ಅಧಿಕಾರ ಇದೆ ಎಂದು ಹೇಳಿದರು.
ಈ ವೇಳೆ ಜಡ್ಜ್ ಸಂತೋಷ್ ಗಜಾನನ ಭಟ್, ಕೋರ್ಟ್ ʻಬಿ ರಿಪೋರ್ಟ್ʼ ಒಪ್ಪಿಕೊಂಡರೆ ನಿಮ್ಮ ನಿಲುವೇನು? ಅಂತ ಪ್ರಶ್ನೆ ಮಾಡಿದ್ರು. ಇದಕ್ಕೆ ಪ್ರತಿಕ್ರಿಯಿಸಿದ ವಕೀಲರು, ಇಡಿ ತನಿಖೆಯಲ್ಲಿ ಪತ್ತೆಯಾದ ಅಂಶಗಳನ್ನು ಹಂಚಿಕೊಂಡಿದೆ. ಲೋಕಾಯುಕ್ತ ಪೊಲೀಸರಿಗೆ ವಿವರ ಹಂಚಿಕೊಂಡರೂ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಹೀಗಾಗಿ ಇಡಿ ಬಿ ರಿಪೋರ್ಟ್ ಪ್ರಶ್ನಿಸಿದೆ. ಒಂದು ವೇಳೆ ಕೋರ್ಟ್ ಬಿ ರಿಪೋರ್ಟ್ ಒಪ್ಪಿಕೊಂಡರೆ ಅದನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸುತ್ತೇವೆ. ಬಿ ರಿಪೋರ್ಟ್ ಪ್ರಶ್ನಿಸಲು ಇಡಿಗೆ ಅಧಿಕಾರವಿದೆ ಎಂದು ವಾದಿಸಿದರು.
ವಾದ ಪ್ರತಿವಾದಗಳನ್ನು ಆಲಿಸಿದ ಬಳಿಕ ಕೋರ್ಟ್ ಏಪ್ರಿಲ್ 8ಕ್ಕೆ ವಿಚಾರಣೆ ಮುಂದೂಡಿತು. ಅಲ್ಲದೇ ಏಪ್ರಿಲ್ 8ಕ್ಕೆ ಲೋಕಾಯುಕ್ತ ಎಸ್‌ಪಿಪಿಗೂ ವಾದ ಮಂಡನೆ ಅವಕಾಶ ಕಲ್ಪಿಸಲು ಕೋರ್ಟ್ ನಿರ್ಧರಿಸಿತು.