ವಕ್ಫ್ ಆಸ್ತಿ ದುರುಪಯೋಗ ಆಗಬಾರದು, ಅದಕ್ಕಾಗಿ ಈ ಮಸೂದೆ ಜಾರಿ: ಜೆ.ಪಿ ನಡ್ಡಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಸ್ಲಿಂ ದೇಶಗಳು ವಕ್ಫ್ ಅನ್ನು ಪರಾಮರ್ಶಕ, ಡಿಜಿಟಲ್ ಮಾಡುತ್ತಿವೆ. ಭಾರತದಲ್ಲಿ ಮಾಡಲು ಏನ್ ಸಮಸ್ಯೆ? ವಕ್ಫ್ ಆಸ್ತಿ ಸರಿಯಾದ ಕೈಯಲ್ಲಿ ಇರಬೇಕು, ಸರಿಯಾಗಿ ಬಳಕೆಯಾಗಬೇಕು. ವಕ್ಫ್ ಆಸ್ತಿ ಹೆಚ್ಚುತ್ತಿದೆ, ಹಾಗಾಗಿ ಅದರ ದುರುಪಯೋಗ ಆಗಬಾರದು. ಆದ್ದರಿಂದಲೇ ಅದಕ್ಕೆ ಕಾನೂನು ಮಾಡುತ್ತಿದ್ದೇವೆ, ದುರುಪಯೋಗ ತಡೆಯುತ್ತಿದ್ದೇವೆ ಎಂದು ಸಚಿವ ಜೆ.ಪಿ ನಡ್ಡಾ ಹೇಳಿದ್ದಾರೆ .

ರಾಜ್ಯಸಭೆಯಲ್ಲಿ ವಕ್ಫ್ ಬಿಲ್ ಮೇಲೆ ಮಾತನಾಡಿದ ಅವರು, ಕಳೆದ ಕೆಲವು ದಶಕಗಳಲ್ಲಿ 5,970 ಸರ್ಕಾರಿ ಆಸ್ತಿಗಳನ್ನು ವಕ್ಫ್‌ ಆಸ್ತಿ ಎಂದು ಘೋಷಿಸಲಾಗಿದೆ. ಕರ್ನಾಟಕದಲ್ಲಿ 1975 -2020ರ ವರೆಗೂ 40 ಆಸ್ತಿಗಳನ್ನು ವಕ್ಫ್‌ ಆಸ್ತಿ ಎಂದು ಘೋಷಿಸಲಾಗಿದೆ. ಇದರಲ್ಲಿ ಕೆರೆಗಳುಮ, ರೈತರ ಜಮೀನು, ಮಂದಿರ, ಸಾರ್ವಜನಿಕ ಆಸ್ತಿಯೂ ಸೇರಿದೆ. ವಕ್ಫ್ ಆಸ್ತಿ ಹೆಚ್ಚುತ್ತಿದೆ, ಹಾಗಾಗಿ ಅದರ ದುರುಪಯೋಗ ಆಗಬಾರದು. ಆದ್ದರಿಂದಲೇ ಅದಕ್ಕೆ ಕಾನೂನು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಕಳೆದ 70 ವರ್ಷಗಳಲ್ಲಿ ಯಾರು ಅವರನ್ನು ಬೆದರಿಸಿ ಇಟ್ಟಿದ್ದಾರೆ? ಅವರನ್ನು ಯಾರು ಪ್ರತ್ಯೇಕವಾಗಿ ನೋಡಿದ್ದಾರೆ? 50-100 ವರ್ಷಗಳ ಬಳಿಕ ನಾವು ಯಾರು ಇರಲ್ಲ. ಆದರೆ ಮಾಡಿದ ಕೆಲಸಗಳು ಪರಿಣಾಮ ಬೀರುತ್ತವೆ ಎಂದರು.

ವಕ್ಫ್ ಆಸ್ತಿಯಲ್ಲಿ ಏರಿಕೆಯಾದರೂ ಅದರ ಆದಾಯದಲ್ಲಿ ಯಾವುದೇ ಏರಿಕೆಯಾಗಿಲ್ಲ. ವಕ್ಫ್ ಆಸ್ತಿ ದುರ್ಬಳಕೆ ಬಗ್ಗೆ ಸಿಎಜಿ ವರದಿಯಲ್ಲಿ ಉಲ್ಲೇಖಿಸಿದೆ. ಕೇರಳದಲ್ಲಿ ಕ್ರಿಶ್ಚಿಯನ್ ಆಸ್ತಿಯನ್ನೂ ವಶಪಡಿಸಿಕೊಳ್ಳಿಸಲಾಗುತ್ತಿದೆ. ಅವರು ನಮ್ಮ ಬಳಿ ಅಳಲು ವ್ಯಕ್ತಪಡಿಸುತ್ತಿದ್ದಾರೆ. ಈ ದುರ್ಬಳಕೆಗೆ ಕಡಿವಾಣ ಹಾಕೋದಕ್ಕೆ ವಕ್ಫ್‌ ಮಸೂದೆಗೆ ತಿದ್ದುಪಡಿ ತರಲಾಗಿದೆ ಎಂದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!