ಮುಡಾ ಹಗರಣ, ಸಿಎಂ ಸಿದ್ದರಾಮಯ್ಯ ಪರವಾಗಿ ಸಂಪುಟ ನಿರ್ಣಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಮುಡಾ ಪ್ರಕರಣಕ್ಕೆ ಸಂಬಂಧಿಸಿ ಸಿಎಂಗೆ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ನೋಟಿಸ್ ನೀಡಿದ್ದರು. ಆದರೆ ರಾಜ್ಯಪಾಲರ ನೋಟಿಸ್ ವಿರುದ್ಧ ಸುದೀರ್ಘ ನಿರ್ಣಯ ಮಾಡಿ ಕ್ಯಾಬಿನೆಟ್ ಒಪ್ಪಿಗೆ ಕೊಟ್ಟಿದೆ.

ಸಿಎಂ ಅನುಪಸ್ಥಿತಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಗುರುವಾರ ಸಚಿವ ಸಂಪುಟ ಸಭೆ ನಡೆಸಲಾಯಿತು. ಮೂಡ ದಾಖಲೆಗಳನ್ನು ಸಚಿವ ಸಂಪುಟ ಸಭೆಗೆ ತರಿಸಿಕೊಳ್ಳಲಾಗಿತ್ತು. ಯಾರಿಗೆ ಸೈಟುಗಳ ಹಂಚಿಕೆಯಾಗಿದೆ ಎಂಬ ಸಂಪೂರ್ಣ ವಿವರ ತರಿಸಿಕೊಂಡು ಚರ್ಚಿಸಲಾಯಿತು.

ಕ್ಯಾಬಿನೆಟ್‌ನಲ್ಲಿ, ರಾಜ್ಯಪಾಲರು ನೋಟಿಸ್‌ನಲ್ಲಿ ಎತ್ತಿರುವ ಪ್ರಶ್ನೆಗಳನ್ನು ವಿರೋಧಿಸಿ ಸುದೀರ್ಘ ನಿರ್ಣಯ ತೆಗೆದುಕೊಳ್ಳಲಾಯಿತು. ಸಾಮಾಜಿಕ ಕಾರ್ಯಕರ್ತರ ಟಿ.ಜೆ.ಅಬ್ರಹಾಂ ಎತ್ತಿರುವ ಆರೋಪಗಳಿಗೂ ದಾಖಲೆ ಸಮೇತ ಉತ್ತರ ಕೊಟ್ಟು ನಿರ್ಣಯಿಸಲಾಯಿತು. 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. Governer may Direct government to form enquiry committee. No need to accord permission on public application. If accord sanction it becomes precedent in future.

LEAVE A REPLY

Please enter your comment!
Please enter your name here

error: Content is protected !!