February 22, 2026
Sunday, February 22, 2026
spot_img

ದಳಪತಿ ವಿಜಯ್ ‘ಲಾಸ್ಟ್ ಡಾನ್ಸ್’ಗೆ ಮುಹೂರ್ತ ಫಿಕ್ಸ್: ಫ್ಯಾನ್ಸ್‌ಗೆ ಸಿಗಲಿದೆಯೇ ಬರ್ತ್‌ಡೇ ಗಿಫ್ಟ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳು ಚಿತ್ರರಂಗದ ಅಧಿಪತಿ ದಳಪತಿ ವಿಜಯ್ ಈಗ ಬಣ್ಣದ ಲೋಕದಿಂದ ರಾಜಕೀಯ ರಣರಂಗಕ್ಕೆ ಅಧಿಕೃತವಾಗಿ ಧುಮುಕಿದ್ದಾರೆ. ತಮ್ಮ ‘ತಮಿಳಗ ವೆಟ್ರಿ ಕಳಗಂ’ ಪಕ್ಷದ ಮೂಲಕ ಜನಸೇವೆಗೆ ಇಳಿಯುವ ಮುನ್ನ ಅವರು ನಟಿಸಿರುವ ಕೊನೆಯ ಸಿನಿಮಾ ‘ಜನ ನಾಯಗನ್’ ಸದ್ಯ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ಚಿತ್ರದ ಬಿಡುಗಡೆಗಾಗಿ ಕಾದು ಕುಳಿತಿರುವ ಅಭಿಮಾನಿಗಳಿಗೆ ಈಗ ಮಹತ್ವದ ಅಪ್‌ಡೇಟ್ ಒಂದಿದೆ.

ಸಂಕ್ರಾಂತಿಗೇ ಅಬ್ಬರಿಸಬೇಕಿದ್ದ ಈ ಸಿನಿಮಾ ಸಿಬಿಎಫ್‌ಸಿ ಪ್ರಮಾಣ ಪತ್ರದ ವಿಳಂಬದಿಂದಾಗಿ ತೆರೆಗೆ ಬರಲು ಸಾಧ್ಯವಾಗಿರಲಿಲ್ಲ. ಮೂಲಗಳ ಪ್ರಕಾರ, ವಿಜಯ್ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ, ಅಂದರೆ ಜೂನ್ 2026ರ ಸುಮಾರಿಗೆ ಚಿತ್ರವನ್ನು ವಿಶ್ವಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ. ಜೂನ್ 22 ವಿಜಯ್ ಅವರ ಹುಟ್ಟುಹಬ್ಬವಾಗಿದ್ದು, ಅದೇ ವಾರದಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆ ದಟ್ಟವಾಗಿದೆ.

ದಳಪತಿ ವಿಜಯ್ ಸಿನಿಮಾಗೆ ವಿದಾಯ ಹೇಳುವ ಈ ಕ್ಷಣ ಅಭಿಮಾನಿಗಳಿಗೆ ಭಾವುಕವಾಗಿದ್ದರೂ, ‘ಜನ ನಾಯಗನ್’ ಮೂಲಕ ಅವರು ಯಾವ ರೀತಿ ರಾಜಕೀಯ ಸಂದೇಶ ನೀಡಲಿದ್ದಾರೆ ಎಂಬ ಕುತೂಹಲ ಇಡೀ ದಕ್ಷಿಣ ಭಾರತದಲ್ಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !