October 10, 2026
Saturday, October 10, 2026
spot_img

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲಕ್ಕೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ದಂಪತಿ ಭೇಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂತರ ಖ್ಯಾತಿಯ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಸೋಮವಾರ ಕುಟುಂಬ ಸಮೇತರಾಗಿ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಇವರೊಂದಿಗೆ ಅವರ ಪತ್ನಿ ಪ್ರಗತಿ ಶೆಟ್ಡಿ, ತಾಯಿ ರತ್ನಾವತಿ ಹಾಗೂ ಮಕ್ಕಳು ಆಗಮಿಸಿದ್ದರು.

ಶ್ರೀ ದೇವಳಕ್ಕೆ ಆಗಮಿಸಿದ ಅವರು ದೇವರ ದರುಶನ ಪಡೆದು ಮಧ್ಯಾಹ್ನದ ಮಹಾಪೂಜೆ ವೀಕ್ಷಿಸಿದರು. ದೇವಳದ ಅರ್ಚಕರು ಅವರಿಗೆ ಶಾಲು ಹೊದಿಸಿ ಮಹಾಪ್ರಸಾದ ಸ್ವೀಕರಿಸಿದರು. ಬಳಿಕ ಹೊಸಳಿಗಮ್ಮನ ದರುಶನ ಪಡೆದು ಪ್ರಸಾದ ಬೋಜನ ಸ್ವೀಕರಿಸಿದರು.

ಈ ಸಂದರ್ಭ ಶಿಷ್ಟಾಚಾರ ಅಧಿಕಾರಿ ಜಯರಾಮ ರಾವ್, ಶ್ರೀ ದೇವಳದ ಹರೀಶ್ ಉಪಸ್ಥಿತರಿದ್ದರು

Must Read