ರಾಜಕೀಯದತ್ತ ಬಹುಭಾಷಾ ನಟಿ ರಮ್ಯಾ ಕೃಷ್ಣನ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಹುಭಾಷಾ ನಟಿ ರಮ್ಯಾ ಕೃಷ್ಣನ್ (Ramya Krishan)​ ಸಿನಿ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮಾಡಿಸಿದ್ದಾರೆ. ಆದ್ರೂ ವಯಸ್ಸು 52 ಆದರೂ ಆ ತೇಜಸ್ಸಿಗೆ ಏನೂ ಕೊರತೆಯಿಲ್ಲ. ಹೀಗಿರುವಾಗ ರಾಜಕೀಯ ಎಂಟ್ರಿಯ ಬಗ್ಗೆ ನಟಿ ಮಾತನಾಡಿದ್ದಾರೆ.

ಕೆಲವು ಚಿತ್ರ ತಾರೆಯರು ಒಂದು ಹಂತ ತಲುಪಿದ ಮೇಲೆ ರಾಜಕೀಯ ಪ್ರವೇಶ ಮಾಡುವುದು ಮಾಮೂಲು. ಕೆಲವರಿಗೆ ಅದೃಷ್ಟ ಒಲಿದರೆ, ರಾಜಕೀಯಲ್ಲಿ ಹಲವು ತಾರೆಯರಿಗೆ ಅದೃಷ್ಟ ಖುಲಾಯಿಸುವುದು ಕಷ್ಟವೇ. ಅದೇನೇ ಇದ್ದರೂ ಈಗ ರಮ್ಯಾ ಕೃಷ್ಣನ್​ ಅವರ ವಿಷಯ ಬಹಳ ಸುಳಿದಾಡುತ್ತಿದೆ. ಇದಕ್ಕೆ ಪ್ರಮುಖ ಕಾರಣ ವೈಸಿಪಿ ನಾಯಕಿ ಹಾಗೂ ಸಚಿವೆ ರೋಜಾ (Roja) ಅವರನ್ನು ರಮ್ಯಾಕೃಷ್ಣ ಈಚೆಗೆ ಭೇಟಿ ಮಾಡಿದ್ದರು. ದರಿಂದ ಅವರು ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಇದಕ್ಕೆ ಸ್ಪಷ್ಟೀಕರಣ ನೀಡಿರುವ ರಮ್ಯಾ ಕೃಷ್ಣ, ಸದ್ಯ ಅಂಥದ್ದೇನೂ ವಿಷಯವಿಲ್ಲ ಎಂದಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನದಲ್ಲಿ ದರುಶನ ಪಡೆಯಲು ರೋಜಾ ಅವರ ಸಹಾಯವನ್ನು ತೆಗೆದುಕೊಂಡಿದ್ದೆ ಮತ್ತು ರೋಜಾ ಅವರನ್ನು ನೋಡಿ ಬಹಳ ದಿನಗಳಾಗಿದ್ದರಿಂದ ಅವರನ್ನು ಭೇಟಿ ಮಾಡಲು ಅವರ ಮನೆಗೆ ಹೋಗಿದ್ದೆ ಅಷ್ಟೇ ಎಂದಿದ್ದಾರೆ. ಒಂದು ವೇಳೆ ರಾಜಕೀಯ ಸೇರುವ ಯೋಚನೆ ಇದ್ದರೆ ನಿಮಗೇ ಮೊದಲು ತಿಳಿಸುತ್ತೇನೆ, ಯಾವ ಪಕ್ಷ ಎಂದೂ ಆಗಲೇ ಹೇಳುತ್ತೇನೆ ಎನ್ನುವ ಮೂಲಕ ಸದ್ಯ ಗಾಳಿಸುದ್ದಿಗೆ ತೆರೆ ಎಳೆದಿದ್ದಾರೆ.

ಚೆನ್ನೈ ಮೂಲದ ರಮ್ಯಾ, ತೆಲುಗು , ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ನಾಲ್ಕು ಫಿಲ್ಮ್​ಫೇರ್​ (Film Fare) ಪ್ರಶಸ್ತಿ, ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ, ಮೂರು ನ೦ದಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ರಮ್ಯಾ ಕೃಷ್ಣ ಎಂಬ ಹೆಸರಿನಿಂದ ಇವರು ಫೇಮಸ್​. ಮೋಡಿ ಮಾಡುವ ಅಭಿನಯ, ನೃತ್ಯದ ಮೂಲಕ ಎಲ್ಲರ ಹೃದಯ ಗೆದ್ದಿರುವ ನಟಿ ಭರತನಾಟ್ಯ,ಕೂಚಿಪೂಡಿಯಂಥ ಶಾಸ್ತ್ರೀಯ ನೃತ್ಯಗಳಲ್ಲಿಯೂ ಎತ್ತಿದ ಕೈ. ‘ಬಾಹುಬಲಿ’ ಚಿತ್ರದಲ್ಲಿ ಶಿವಗಾಮಿ (ದೇವಸೇನಾ) ಪಾತ್ರದಲ್ಲಿ ನಟಿಸಿದ್ದರಮ್ಯಾ ಕೃಷ್ಣನ್ ಈ ಚಿತ್ರದಲ್ಲಿ ತಮ್ಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಿದ್ದಲ್ಲದೆ, ಚಿತ್ರದಲ್ಲಿನ ಅವರ ಸಂಭಾಷಣೆಗಳಿಗೆ ಅಭಿಮಾನಿಗಳು ಶಿಳ್ಳೆಯ ಮೇಲೆ ಶಿಳ್ಳೆ ಹೊಡೆದಿದ್ದರು.

ಬಾಯ್​ಫ್ರೆಂಡ್​​ ಜೊತೆ ತಿರುಪತಿಗೆ ಹೋದ ಜಾಹ್ನವಿ ಕಪೂರ್​ ಬೆರಳಲ್ಲಿ ವಜ್ರದ ಉಂಗುರ! ಆಗಿದ್ದೇನು?

ಇವೆಲ್ಲಾ ಹಳೆ ಸುದ್ದಿಗಳಾದವು ಇದೀಗ ಹೊಸ ಸುದ್ದಿ ಏನಪ್ಪಾ ಎಂದರೆ, ರಮ್ಯಾ ಕೃಷ್ಣನ್ ರಾಜಕೀಯ ಪ್ರವೇಶ ಮಾಡುತ್ತಿದ್ದಾರೆ ಎನ್ನುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!