ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಷ್ಕರ್-ಎ-ತೊಯ್ಬಾದ ಕಮಾಂಡರ್, ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಅಝಂ ಚೀಮಾ ಪಾಕಿಸ್ತಾನದ ಫೈಸಲಾಬಾದ್ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದಾನೆ.
2008,2006 ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ಈತನನ್ನು ಭಾರತ ಸರ್ಕಾರ ಹುಡುಕುತ್ತಿತ್ತು.
ಮುಂಬೈ ಟ್ರೇನ್ ಸ್ಫೋಟದಿಂದಾಗಿ ಒಟ್ಟಾರೆ ೨೦೯ ಪ್ರಯಾಣಿಕರು ಪ್ರಾಣ ಬಿಟ್ಟಿದ್ದರು. 800 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಇನ್ನು 2008ರ ಮುಂಬೈ ದಾಳಿಗೆ ತರಬೇತಿ ಕೊಟ್ಟಿದ್ದು ಈತನೇ ಎಂದು ಅಮೆರಿಕ ಮಾಹಿತಿ ನೀಡಿದೆ. ಈ ಬ್ಲಾಸ್ಟ್ನಲ್ಲಿಯೂ 166 ಮಂದಿ ಮೃತಪಟ್ಟಿದ್ದರು.