ಮುಂಬೈ ಆಕ್ರಮಣಕಾರಿ ಬ್ಯಾಟಿಂಗ್: ಮತ್ತೊಮ್ಮೆ RCBಗೆ ಹೀನಾಯ ಸೋಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆರ್​ಸಿಬಿಯ ಸೋಲಿನ ಅಧ್ಯಾಯ ಮತ್ತೆ ಮುಂದುವರಿದಿದೆ. ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ 7 ವಿಕೆಟ್​ಗಳ ಹೀನಾಯ ಸೋಲು ಕಂಡಿದೆ.

ಸೂರ್ಯಕುಮಾರ್​ (52), ಇಶಾನ್ ಕಿಶನ್​(69) ಅವರ ಬ್ಯಾಟಿಂಗ್​ ಹೋರಾಟ, ಜಸ್​ಪ್ರೀತ್​ ಬುಮ್ರಾ 5 ವಿಕೆಟ್​​ ಮುಂಬೈ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದೆ.

ವಾಂಖೆಡೆ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಬೃಹತ್​ ಮೊತ್ತದ ಆಟದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಆರ್​ಸಿಬಿ, ದಿನೇಶ್​ ಕಾರ್ತಿಕ್​ (53), ರಜತ್​ ಪಾಟಿದಾರ್​(50) ಮತ್ತು ನಾಯಕ ಫಾಫ್​ ಡುಪ್ಲೆಸಿಸ್(61)​ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 196 ರನ್​ ಗಳಿಸಿತು.

ಆದರೆ ಈ ದೊಡ್ಡ ಮೊತ್ತವನ್ನು ಬಹಳ ಸರಾಗವಾಗಿ ಮುಂಬೈ ತಂಡ ಬ್ಯಾಟಿಂಗ್​ ನೆರವಿನಿಂದ 15.3 ಓವರ್​ಗಳಲ್ಲಿ ಕೇವಲ 3 ವಿಕೆಟ್​ಗೆ 199 ರನ್​ ಬಾರಿಸಿ ವಿಜಯ ಪತಾಕೆ ಹಾರಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!