ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈ ಇಂಡಿಯನ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 162 ರನ್ಗಳ ಸಾಧಾರಣ ಮೊತ್ತ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಹೈದರಾಬಾದ್ ಪರ ಅಭಿಷೇಕ್ ಶರ್ಮಾ 28 ಎಸೆತಗಳಲ್ಲಿ 7 ಬೌಂಡರಿಗಳ ಸಹಿತ 40 ರನ್ಗಳಿಸಿದರು. ಇನ್ನು ಟ್ರಾವಿಸ್ ಹೆಡ್ 29 ಎಸೆತಗಳಲ್ಲಿ ಕೇವಲ 28, ನಿತೀಶ್ ಕುಮಾರ್ ರೆಡ್ಡಿ 21 ಎಸೆತಗಳಲ್ಲಿ 19 ರನ್ಗಳಿಸಿ ದಯನೀಯ ವೈಫಲ್ಯ ಅನುಭವಿಸಿದರು.
ಹೆನ್ರಿಚ್ ಕ್ಲಾಸೆನ್ 37 ರನ್ ಸಿಡಿಸಿ 19ನೇ ಓವರ್ನಲ್ಲಿ ಬುಮ್ರಾ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು. ಆದರೆ ಹಾರ್ದಿಕ್ ಪಾಂಡ್ಯ ಎಸೆದ ಕೊನೆಯ ಓವರ್ನಲ್ಲಿ ಅನಿಕೇತ್ ವರ್ಮಾ ಹಾಗೂ ಪ್ಯಾಟ್ ಕಮಿನ್ಸ್ 22 ರನ್ ಸೂರೆಗೈದು ತಂಡದ ಮೊತ್ತವನ್ನ 162ಕ್ಕೆ ಕೊಂಡೊಯ್ದರು. ಅನಿಕೇತ್ 8 ಎಸೆತಗಳಲ್ಲಿ ಅಜೇಯ 18 ರನ್ಗಳಿಸಿದರೆ, ಪ್ಯಾಟ್ ಕಮಿನ್ಸ್ ಅಜೇಯ 8 ರನ್ಗಳಿಸಿದರು.