ಹೊಸದಿಗಂತ ಡಿಜಿಟಲ್ ಡೆಸ್ಕ್
ಐಪಿಎಲ್ ನ ಅತ್ಯಂತ ಯಶಸ್ವಿ ಪ್ರಾಂಚೈಸಿ ಮುಂಬೈ ಇಂಡಿಯನ್ಸ್ 2023 ರ ಆವೃತ್ತಿಗೆ ತನ್ನ ಹೊಸ ಮುಖ್ಯ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಮಾಜಿ ವಿಕೆಟ್ ಕೀಪರ್- ಬ್ಯಾಟರ್ ಮಾರ್ಕ್ ಬೌಚರ್ ಅವರನ್ನು ನೇಮಕ ಮಾಡಿದೆ.
ಆಸ್ಗಟ್ರೇಲಿಯಾದಲ್ಲಿ ನಡೆಯಲಿರುವ T20 ವಿಶ್ವಕಪ್ ಬಳಿಕ ಸೌತ್ ಆಫ್ರಿಕಾ ಕೋಚ್ ಹುದ್ದೆಯಿಂದ ಬೌಚರ್ ಕೆಳಿಗಿಳಿಯುವುದಾಗಿ ಹೇಳಿದ್ದರು. ಈ ವಾರದ ಆರಂಭದಲ್ಲಿ, ಕ್ರಿಕೆಟ್ ಸೌತ್ ಆಫ್ರಿಕಾ (CSA) ಸಹ ಮುಖ್ಯ ಕೋಚ್ ಹುದ್ದೆಯಿಂದ ಬೌಚರ್ ಕೆಳಗಿಳಿಯುವುದನ್ನು ದೃಢಪಡಿಸಿತ್ತು.ಈ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ದಕ್ಷಿಣ ಆಫ್ರಿಕಾದ ಮಾಜಿ ವಿಕೆಟ್ ಕೀಪರ್ ಮಾರ್ಕ್ ಬೌಚರ್ ಅವರನ್ನು ಹೊಸ ಕೋಚ್ ಆಗಿ ನೇಮಕ ಮಾಡಿದೆ. ಬೌಚರ್ ಅವರು ವಿಕೆಟ್-ಕೀಪರ್, ಬ್ಯಾಟ್ಸ್ಮನ್ ಆಗಿ ಸುದೀರ್ಘ ಮತ್ತು ಸುಪ್ರಸಿದ್ಧ ವೃತ್ತಿಜೀವನವನ್ನು ಹೊಂದಿದ್ದಾರೆ. ಮತ್ತು ಟೆಸ್ಟ್ ನಲ್ಲಿ ವಿಕೆಟ್ ಹಿಂದೆ ಅತಿ ಹೆಚ್ಚು ಬಲಿಪಡೆದ ದಾಖಲೆಯನ್ನು ಹೊಂದಿದ್ದಾರೆ. ನಿವೃತ್ತಿಯ ನಂತರ ಅವರು ದಕ್ಷಿಣ ಆಫ್ರಿಕಾದಲ್ಲಿ ಉನ್ನತ ಮಟ್ಟದ ಕ್ರಿಕೆಟ್ ಫ್ರಾಂಚೈಸಿಯಾದ ಟೈಟಾನ್ಸ್ಗೆ ತರಬೇತುದಾರರಾಗಿ ಅಧಿಕಾರ ವಹಿಸಿಕೊಂಡಿದ್ದ ಅವರು ಐದು ದೇಶೀಯ ಟೂರ್ನಿಗಳಲ್ಲಿ ತಂಡ ಪ್ರಶಸ್ತಿಗಳಿಸಲು ಕಾರಣರಾಗಿದ್ದಾರೆ. 2019 ರಲ್ಲಿ, ಕ್ರಿಕೆಟ್ ದಕ್ಷಿಣ ಆಫ್ರಿಕಾ ಮಾರ್ಕ್ ಬೌಚರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿತು. ಕೋಚ್ ಆಗಿ ಅವರು 11 ಟೆಸ್ಟ್ ಗೆಲುವುಗಳು, 12 ಏಕದಿನ ಮತ್ತು 23 ಟಿ 20 ವಿಜಯಗಳನ್ನು ಕಂಡಿದ್ದಾರೆ.
Presenting आपले नवीन Head Coach – 𝐌𝐀𝐑𝐊 𝐁𝐎𝐔𝐂𝐇𝐄𝐑 💙
Paltan, drop a 🙌 to welcome the 🇿🇦 legend to our #OneFamily 👏#DilKholKe #MumbaiIndians @markb46 @OfficialCSA pic.twitter.com/S6zarGJmNM
— Mumbai Indians (@mipaltan) September 16, 2022
“MI ಯ ಮುಖ್ಯ ತರಬೇತುದಾರನಾಗಿ ನೇಮಕಗೊಂಡಿರುವುದು ಗೌರವದ ವಿಚಾರ. ಮುಂಬೈ ವಿಶ್ವದ ಅತ್ಯಂತ ಯಶಸ್ವಿ ಕ್ರೀಡಾ ಫ್ರಾಂಚೈಸಿಗಳಲ್ಲಿ ಒಂದಾಗಿದೆ. ನಾನು ಸವಾಲು ಮತ್ತು ಗೌರವಕ್ಕಾಗಿ ಎದುರು ನೋಡುತ್ತಿದ್ದೇನೆ. ಇದು ಉತ್ತಮ ನಾಯಕತ್ವ ಮತ್ತು ಆಟಗಾರರನ್ನು ಹೊಂದಿರುವ ಪ್ರಬಲ ಪ್ರಾಂಚೈಸಿಯಾಗಿದೆ. ತಂವನ್ನು ಮತ್ತಷ್ಟು ಔನತ್ಯಕ್ಕೇರಿಸಲು ನಾನು ಎದುರು ನೋಡುತ್ತಿದ್ದೇನೆ” ಎಂದು ಬೌಚರ್ ಹೇಳಿದ್ದಾರೆ.
ಈ ವಾರದ ಆರಂಭದಲ್ಲಿ, ಮುಂಬೈ ಇಂಡಿಯನ್ಸ್ನ ಮಾಜಿ ಮುಖ್ಯ ಕೋಚ್ ಮಹೇಲಾ ಜಯವರ್ಧನೆ ಅವರನ್ನು ಫ್ರಾಂಚೈಸಿ ಜಾಗತಿಕ ಕಾರ್ಯಪಡೆಯ ಮುಖ್ಯಸ್ಥರನ್ನಾಗಿ ನೇಮಿಸಿತು. ಕ್ರಿಕೆಟ್ ಕಾರ್ಯಾಚರಣೆಯ ನಿರ್ದೇಶಕರಾಗಿದ್ದ ಜಹೀರ್ ಖಾನ್ ಅವರಿಗೂ ಹೊಸ ಪಾತ್ರವನ್ನು ನೀಡಲಾಗಿದೆ. ಭಾರತದ ಮಾಜಿ ವೇಗಿ ಈಗ MI ಯ ಗ್ಲೋಬಲ್ ಕ್ರಿಕೆಟ್ ಡೆವಲಪ್ಮೆಂಟ್ ಮುಖ್ಯಸ್ಥರಾಗಿರುತ್ತಾರೆ. ಇಬ್ಬರೂ ಫ್ರಾಂಚೈಸಿಯ ಬೆಳೆಯುತ್ತಿರುವ ಜಾಗತಿಕ ಕ್ರಿಕೆಟ್ ಚಟುವಟಿಕೆಗಳಿಗೆ ಬಲತುಂಬಲು ಕೇಂದ್ರ ತಂಡವನ್ನು ಸೇರಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.