ನನಗೆ ಯಾರಾದ್ರೂ ಸಹಾಯ ಮಾಡಬಹುದಾ?, ಹೆಡ್​​​ಫೋನ್​​ ಹಾಕಿಕೊಳ್ಳಲು ಪರದಾಡಿದ ಪಾಕ್​ ಪ್ರಧಾನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಉಜ್ಬೇಕಿಸ್ತಾನದಲ್ಲಿ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆ ಆರಂಭಗೊಂಡಿದೆ. ಈ ಶೃಂಗದಲ್ಲಿ ಭಾರತದ ಪ್ರಧಾನಿ ಮೋದಿ ಸೇರಿದಂತೆ ಅನೇಕ ರಾಷ್ಟ್ರದ ಪ್ರಧಾನಿಮಂತ್ರಿಗಳು, ಅಧ್ಯಕ್ಷರು ಭಾಗಿಯಾಗಿದ್ದಾರೆ.
ಇನ್ನು ಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​ ಹಾಗೂ ಪಾಕ್​ ಪ್ರಧಾನಿ ಶೆಹಬಾಜ್‌ ಷರೀಫ್‌ ಮುಖಾಮುಖಿಯಾಗಿದ್ದು, ಕೆಲಹೊತ್ತು ಮಾತುಕತೆ ನಡೆಸಿದರು. ಈ ಸಂದರ್ಭ ಪಾಕ್​ ಪ್ರಧಾನಿ ಮುಜುಗರಕ್ಕೊಳಗಾಗಿದ್ದಾರೆ.
ವ್ಲಾಡಿಮಿರ್ ಪುಟಿನ್ ಜೊತೆ ಶೆಹಬಾಜ್​ ಷರೀಪ್​ ದ್ವಿಪಕ್ಷೀಯ ಮಾತುಕತೆ ನಡೆಸುತ್ತಿದ್ದರು. ಈ ವೇಳೆ ಶೆಹಬಾಜ್‌ ಷರೀಫ್‌ ಹೆಡ್​​ಫೋನ್ ಹಾಕಿಕೊಳ್ಳಲು ಹರಸಾಹಸವನ್ನೇ ಮಾಡಿದರು. ಇದನ್ನು ಗಮನಿಸಿದ ರಷ್ಯಾಧ್ಯಕ್ಷರು ಮುಗುಳುನಗೆ ಬೀರಿದರು. ಕೊನೆಗೆ ಹೆಡ್​​ಫೋನ್​ ಹಾಕಿಕೊಳ್ಳಲು ನನಗೆ ಯಾರಾದ್ರೂ ಸಹಾಯ ಮಾಡಬಹುದಾ? ಎಂದು ಕೇಳಿಕೊಂಡಿದ್ದಾರೆ. ಈ ಎಲ್ಲ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!