Wednesday, October 5, 2022

Latest Posts

ಮುಂಬೈನಲ್ಲಿ 26/11 ಮಾದರಿಯ ದಾಳಿ ನಡೆಸುವುದಾಗಿ ಉಗ್ರರ ಬೆದರಿಕೆ: ಜಾಗೃತರಾದ ಪೊಲೀಸರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆ ಕರಾಳ ದಿನ ಎಂದೂ ಮರೆಯಲಾಗದ ಭೀಕರ ದಾಳಿ ಅದು. ಭಾರತದ ಆರ್ಥಿಕ ರಾಜಧಾನಿ ಮುಂಬೈ ಮೇಲೆ ಪಾಕಿಸ್ತಾನದ ಲಷ್ಕರ್‌- ಎ- ತೊಯ್ಬಾ ಉಗ್ರರು ದಾಳಿ ನಡೆಸಿ, ಮೂರು ದಿನಗಳ ಕಾಲ ಉಗ್ರರ ಕಪಿ ಮುಷ್ಟಿಯಿಂದ ನಲುಗಿತ್ತು. ಇದೀಗ ಮತ್ತೊಮ್ಮೆ 26/11 ಮಾದರಿಯ ದಾಳಿಗೆ ತಾವು ಯೋಜನೆ ಸಿದ್ಧಪಡಿಸಿದ್ದೇವೆ ಎಂದು ಭಯೋತ್ಪಾದಕರು ಬೆದರಿಕೆ ಹಾಕಿದ್ದಾರೆ. ಇದಕ್ಕಾಗಿ ಭಾರತದಲ್ಲಿ ಈಗಾಗಲೇ ಆರು ಮಂದಿ ನಮ್ಮ ಯೋಜನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮುಂಬೈ ಪೊಲೀಸ್ ಟ್ರಾಫಿಕ್ ಕಂಟ್ರೋಲ್ ವಾಟ್ಸಾಪ್ ಸಂಖ್ಯೆಗೆ ಈ ಸಂದೇಶ ಬಂದಿದೆ. ಮುಂಬೈನಲ್ಲಿ 26/11 ಮಾದರಿಯ ದಾಳಿ ನಡೆಸುವ ಉದ್ದೇಶದಿಂದ ಭಾರತದಲ್ಲಿ ಆರು ಮಂದಿ ನಮ್ಮನ್ನು ಭೇಟಿಯಾಗಿದ್ದಾರೆ ಎಂದು ಹೇಳಲಾಗಿದೆ. ಮುಂಬೈ ಪೊಲೀಸರು ಭಯೋತ್ಪಾದಕರ ಬೆದರಿಕೆಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಬೆದರಿಕೆಗಳು ಪಾಕಿಸ್ತಾನದಿಂದ ಬಂದಿವೆ ಎಂದು ಪೊಲೀಸ್ ಅಧಿಕಾರಿಗಳು ನಂಬಿದ್ದಾರೆ. ಇದರಿಂದಾಗಿ ಮುಂಬೈ ಪೊಲೀಸರು ಅತ್ಯಂತ ಜಾಗರೂಕತೆಯಿಂದ ಪ್ರತಿ ವಾಹನವನ್ನು ತಪಾಸಣೆ ನಡೆಸುತ್ತಿದ್ದಾರೆ. ಶಂಕಿತರ ವಿಚಾರಣೆ ನಡೆಸಲಾಗುತ್ತಿದೆ. ಪ್ರತಿಯೊಂದು ಪ್ರದೇಶವನ್ನು ಶೋಧಿಸಲಾಗುತ್ತಿದೆ.

ಈ ಮಧ್ಯೆ ಮಹಾರಾಷ್ಟ್ರದ ಕರಾವಳಿ ಪ್ರದೇಶದಲ್ಲಿ ಅನುಮಾನಾಸ್ಪದ ದೋಣಿಯೊಂದು ಭಾರೀ ಅವಾಂತರ ಸೃಷ್ಟಿಸಿದೆ. ಮುಂಬೈನ ರಾಯಗಡ ಜಿಲ್ಲೆಯ ಹರಿಹರೇಶ್ವರ ಕರಾವಳಿ ಪ್ರದೇಶದಲ್ಲಿ ಅನುಮಾನಾಸ್ಪದ ದೋಣಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆ ದೋಣಿಯಿಂದ 3ಎಕೆ 47 ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕ್ರಮದಲ್ಲಿ ಉಗ್ರರು ಬೆದರಿಕೆ ಹಾಕುತ್ತಿರುವುದರಿಂದ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!