ಚೆನ್ನೈ ಬೌಲಿಂಗ್ ದಾಳಿಗೆ ಎಡವಿದ ಮುಂಬೈ: ಅಲ್ಪ ಮೊತ್ತದ ಟಾರ್ಗೆಟ್ ಕೊಟ್ಟ ಸೂರ್ಯ ಟೀಮ್

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ತಂಡದ ಬೌಲಿಂಗ್ ದಾಳಿಗೆ ಮುಂಬೈ ಬ್ಯಾಟರ್​ಗಳು ರನ್​ ಗಳಿಸಿಲು ಪರದಾಡಿದರು. 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 155 ರನ್​ಗಳಿಸಿದೆ.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಮುಂಬೈ ಖಾತೆ ತೆರಯುವ ಮುನ್ನವೇ ರೋಹಿತ್ ಶರ್ಮಾ(0) ವಿಕೆಟ್ ಕಳೆದುಕೊಂಡಿತು. ನಂತರ ಮತ್ತೆ 3ನೇ ಓವರ್​​ನಲ್ಲಿ 12 ರನ್​ಗಳಿಸಿದ್ದ ರಿಕಲ್ಟನ್​ರನ್ನ ಬೌಲ್ಡ್ ಮಾಡುವ ಮೂಲಕ ಮತ್ತೊಂದು ಶಾಕ್ ನೀಡಿದರು. 11 ರನ್​ಗಳಿಸಿದ್ದ ವಿಲ್​ ಜಾಕ್ಸ್ ಅಶ್ವಿನ್ ಸ್ಪಿನ್ ಮರ್ಮವನ್ನು ಅರಿಯದೇ ದುಬೆಗೆ ಕ್ಯಾಚ್ ನೀಡಿ ಔಟ್ ಆದರು.

36ಕ್ಕೆ 3 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಮುಂಬೈಗೆ ನಾಯಕ ನಾಯಕ ಸೂರ್ಯಕುಮಾರ್ ಯಾದವ್ ( 29 ರನ್, 26 ಎಸೆತ,2 ಬೌಂಡರಿ, 1 ಸಿಕ್ಸರ್) ಹಾಗೂ ತಿಲಕ್ ವರ್ಮಾ (31 ರನ್, 25 ಎಸೆತ, 2 ಬೌಂಡರಿ, 2 ಸಿಕ್ಸರ್), 36 ಎಸೆತಗಳಲ್ಲಿ 51 ರನ್​ ಸೇರಿಸಿ ಚೇತರಿಕೆ ನೀಡಿದರು. ಆದರೆ ನಾಯಕನ ವಿಕೆಟ್ ಬೀಳುತ್ತಿದ್ದಂತೆ ಮುಂಬೈ ಪೆವಿಲಿಯನ್ ಪರೇಡ್ ನಡೆಸಿತು.

ರಾಬಿನ್ ಮಿಂಜ್ (3),ನಮನ್ ಧಿರ್(17), ಮಿಚೆಲ್ ಸ್ಯಾಂಟ್ನರ್ (11) ಹಾಗೂ ಟ್ರೆಂಟ್​ ಬೌಲ್ಟ್ (1) ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ದೀಪಕ್ ಚಾಹರ್ 15 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್ ಸಹಿತ ಅಜೇಯ 28 ರನ್​​ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!