ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್ ರೈಲು ಸೇವೆ ಲಭ್ಯವಾಗುತ್ತಿದೆ. ಮುಂಬೈ ಮಂಗಳೂರು ವಂದೇ ಭಾರತ್ ರೈಲು ಸೇವೆ ಆರಂಭಗೊಳ್ಳುತ್ತಿದೆ. ಇದರ ಪರಿಣಾಮ ಸದ್ಯ 15 ಗಂಟೆ ಇರುವ ಮುಂಬೈ-ಮಂಗಳೂರು ರೈಲು ಪ್ರಯಾಣ ವಂದೇ ಭಾರತ್ ಮೂಲಕ 12 ಗಂಟೆಗೆ ಇಳಿಕೆಯಾಗಲಿದೆ.
ಕೇಂದ್ರ ರೈಲ್ವೇ ಇಲಾಖೆ ಇದೀಗ ಮುಂಬೈ-ಮಂಗಳೂರು ವಂದೇ ಭಾರತ್ ರೈಲಿಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಮಂಗಳೂರು ಗೋವಾ ಹಾಗೂ ಗೋವಾ-ಮುಂಬೈ ವಂದೇ ಭಾರತ್ ರೈಲು ಸೇವೆ ಲಭ್ಯವಿದೆ.
ಆರಂಭಿಕ ಹಂತದಲ್ಲಿ ಮುಂಬೈ-ಮಂಗಳೂರು-ಕೋಝಿಕ್ಕೋಡ್ ರೈಲು ಯೋಜನೆಗೆ ಪ್ರಸ್ತಾವನೆ ಇಡಲಾಗಿತ್ತು. ಆದರೆ ಪ್ರತಿ ಭಾರಿ ಮಂಗಳೂರು ಡಿವಿಶನ್‌ನಲ್ಲಿ ರೈಲು ಸೇವೆ ಕೇರಳದ ಲಾಭಿಗೆ ಮಣಿಯುತ್ತಿದೆ ಅನ್ನೋ ಆರೋಪ ಕೇಳಿಬರುತ್ತಲೇ ಇತ್ತು. ಆದರೆ ಇದೀಗ ಮುಂಬೈ-ಮಂಗಳೂರು ವಂದೇ ಭಾರತ್ ರೈಲು ಯೋಜನೆ ಅಂತಿಮಗೊಂಡಿದೆ.