ಹೊಸ ದಿಗಂತ ವರದಿ, ಮುಂಡಗೋಡ:
ತಾಲೂಕಿನ ಟಿಬೆಟಿಯನ್ ಕ್ಯಾಂಪಿಗೆ ಮಂಗಳವಾರ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮಾ ಖಂಡು ಆಗಮಿಸುವ ಹಿನ್ನೆಲೆಯಲ್ಲಿ ಟಿಬೆಟಿಯನ್ ಕಾಲನಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ನ.14 ರಂದು ಮಧ್ಯಾಹ್ನ 2 ಗಂಟೆಗೆ ಟಿಬೆಟಿಯನ್ ಕಾಲನಿಗೆ ಆಗಮಿಸಲಿದ್ದಾರೆ. ಮುಖ್ಯಮಂತ್ರಿಗಳನ್ನು ಬರಮಾಡಿಕೊಳ್ಳಲು ಕಾಲನಿಯ
ಟಿಬೆಟಿಯನ್ ರು ಭರದ ಸಿದ್ದತೆ ನಡೆಸಿದ್ದಾರೆ.
ಮುಖ್ಯಮಂತ್ರಿ ಪೇಮಾ ಖಂಡು ಅವರು ಮಂಗಳವಾರದಿಂದ ನ.16ರ ವರೆಗೆ ಟಿಬೆಟಿಯನ್ ವಿವಿಧ ಕ್ಯಾಂಪ್ ಗಳಿಗೆ ಭೇಟಿ ನೀಡಿ ಟಿಬೆಟಿಯನ್ ರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಪೊಲೀಸ ಬಿಗಿ ಭದ್ರತೆ: ಇಬ್ಬರು ಡಿವೈಎಸ್ಪಿ, 8 ಜನ ಸಿಪಿಐ, 14 ಜನ ಪಿಎಸ್ಐ, 27 ಜನ ಎಎಸೈ, 147 ಕಾನ್ ಸ್ಟೇಬಲ್, 12 ಮಹಿಳಾ ಸಿಬ್ಬಂದಿಗಳು, 1 ಕೆಎಸ್ಆರ್ ಪಿ ಮತ್ತು 2 ಡಿಆರ್ ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.