ದಿಗಂತ ವರದಿ ಮುಂಡಗೋಡ:
ಕಾಡುಕೋಣದ ಮೃತದೇಹವೊಂದು ಪತ್ತೆಯಾದ ಘಟನೆ ತಾಲೂಕಿನ ಚಿಗಳ್ಳಿ ಜಲಾಶಯದ ಹತ್ತಿರದಲ್ಲಿ ಪತ್ತೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಚಿಗಳ್ಳಿ ಜಲಾಶಯದ ಸನಿಹದ ಅರಣ್ಯದಲ್ಲಿ ಕಳೆದ ಎರಡು ದಿನಗಳಿಂದ ದುರ್ವಾಸನೆ ಬರುತ್ತಿದ್ದರಿಂದ ಅಲ್ಲಿಯ ಅರಣ್ಯ ಸಿಬ್ಬಂದಿಗಳು ಈ ವಾಸನೆ ಎಲ್ಲಿಂದ ಬರುತ್ತಿದೆ ಯಾವುದೊ ಪ್ರಾಣೆ ಸತ್ತಿರಬಹುದು ಎಂದು ಶಂಕೆಯಿಂದ ಅರಣ್ಯದಲ್ಲಿ ಹುಡುಕಾಟ ನಡೆಸಿದ್ದಾರೆ.
ನಂತರ ಜಲಾಶಯದ ಸನಿಹದಲ್ಲೆ ಕಾಡುಕೊಣದ ಮೃತದೇಹ ಪತ್ತೆಯಾಗಿದೆ.
ಕೂಡಲೆ ಅರಣ್ಯ ಸಿಬ್ಬಂದಿಗಳು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅದೀಕಾರಿಗಳು ಮೃತಪಟ್ಟ ಕಾಡುಕೊಣ ಸುಮಾರು ಹತ್ತು ವರ್ಷ ವಯಸ್ಸಿನದ್ದು ಎಂದು ಅಂದಾಜಿಸಿದ್ದಾರೆ. ಪಶುವೈದ್ಯಾಧಿಕಾರಿಗೆ ಪೋನ್ ಕರೆ ಮಾಡಿ ಸ್ಥಳಕ್ಕೆ ಬರುವಂತೆ ತಿಳಿಸಿದ್ದಾರೆ. ನಂತರ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಹೃದಯಾಘಾತದಿಂದ ಕಾಡುಕೋಣ ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದರು.