ಮುಂಡಗೋಡ । ಆಕಳುವಿನ ಮೇಲೆ ಹುಲಿ ದಾಳಿ

ಹೊಸದಿಗಂತ ವರದಿ,ಮುಂಡಗೋಡ:

ಕಾತೂರ ಅರಣ್ಯ ವಲಯದ ಬೆಡಸಗಾಂವ ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ಯಾನವಳ್ಳಿ ಗ್ರಾಮ ವ್ಯಾಪ್ತಿಯ ಕಲ್ಲಕೊಪ್ಪದ ಮನೆಯ ಮುಂದೆ ಜಾನುವಾರಗಳನ್ನು ಮೇಯಿಸುತ್ತಿದ್ದ ವೇಳೆ ಹುಲಿ ದಾಳಿ ಮಾಡಿ ಆಕಳೊಂದು ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಾಗೇಶ್ ಪರಮೇಶ್ವರ ಮರಾಠೆ ಎಂಬುವರಿಗೆ ಸೇರಿದ ಆಕಳು ಹುಲಿ ದಾಳಿಗೆ ಬಲಿಯಾಗಿದೆ. ನಾಗೇಶ ಎಂಬುವರ ಸಹೋದರಿಯು ಅರಣ್ಯದಲ್ಲಿರುವ ಮನೆಯ ಆವರಣದಲ್ಲಿ ಜಾನುವಾರಗಳನ್ನು ಮೇಯಿಸುತ್ತಿದ್ದಾಗ ಏಕಾ ಏಕಿ ಹುಲಿ ಆಕಳುವಿನ ಮೇಲೆ ದಾಳಿ ಮಾಡಿದೆ ಭಯಬೀತಳಾದ ನಾಗೇಶ ಅವರ ಸಹೋದರಿ ಹುಲಿಯನ್ನು ಕಂಡು ಮನೆಯ ಒಳಗಡೆ ಓಡಿಹೋಗಿದ್ದಾಳೆ ನಂತರ ಕುಟುಂಬದವರು ಹೊರಗಡೆ ಬಂದು ನೋಡುವಷ್ಟರಲ್ಲಿ ಆಕಳು ಹುಲಿಯ ಬಾಯಿಗೆ ಆಹಾರವಾಗಿದೆ. ಅದನ್ನು ಕಂಡ ಕುಟುಂಬದವರು ಹೆದರಿ ಅಸಹಾಯಕರಾಗಿ ಮನೆಯ ಒಳಗಡೆ ಹೋಗಿದ್ದಾರೆ. ಎರಡು ಮೂರು ಗಂಟೆಯ ನಂತರ ಹೊರಗೆ ಬಂದು ನೋಡಿದಾಗ ಆಕಳ ಹುಲಿ ತಿಂದು ಅರ್ಧ ಬಾಗ ಮಾತ್ರ ಉಳಿದುಕೊಂಡಿದೆ.

ಈ ಬಗ್ಗೆ ಅರಣ್ಯ ಇಲಾಖೆಯ ಗಾರ್ಡಗಳಿಗೆ ತಿಳಿಸಿದರೆ ಅವರು ಅರಣ್ಯ ಅಧಿಕಾರಿಗಳಿಗೆ ತಿಳಿಸುತ್ತಾರೆ ಅದರ ಪರಿಹಾರ ಸಿಗಬಹುದು ಎಂದು ಆಕಳುವಿನ ಮಾಲಿಕರು ಮಾಹಿತಿ ನೀಡಿದ್ದಾರೆ ಆದರೆ ಇದು ವರೆಗೆ ಅರಣ್ಯ ಇಲಾಖೆಯ ಒಬ್ಬ ಸಿಬ್ಬಂದಿ ಕೂಡ ಬಂದು ಪರಿಶೀಲನೆ ಮಾಡುವುದಾಗಲಿ ನೋಡಲು ಬಂದಿಲ್ಲಾ ಅರಣ್ಯ ಇಲಾಖೆಯ ಗಾರ್ಡಗೆ ಕೇಳಿದರೆ ಮನೆಯ ಕೊಟ್ಟಿಗೆಯಲ್ಲಿ ಬಂದು ಜಾನುವಾರಗಳ ಮೇಲೆ ಹುಲಿ ದಾಳಿ ಮಾಡಿದರೆ ಮಾತ್ರ ಪರಿಹಾರ ಕೊಡುತ್ತೇವೆ ಎನ್ನುತ್ತಾರೆ ಎಂದು ಆಕಳುವಿನ ಮಾಲೀಕ ನಾಗೇಶ ಮರಾಠಿ ಹೇಳಿದರು.

ಈ ಬಗ್ಗೆ ಮಾಹಿತಿ ಕೇಳಲು ಕಾತೂರು ವಲಯದ ಅರಣ್ಯಾಧಿಕಾರಿಗೆ ಕರೆ ಮಾಡಿದರೆ ಪೋನ್ ಕರೆಗೆ ಸಿಗುತ್ತಿಲ್ಲ ಹಾಗೂ ಶ್ಯಾನವಳ್ಳಿ ಅರಣ್ಯ ದ ಉಪವಲಯ ಅರಣ್ಯಾಧಿಕಾರಿ ಪೋನ್ ಕರೆ ಸ್ವೀಕರಿಸಲಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!