ಹೊಸದಿಗಂತ ವರದಿ,ಮುಂಡಗೋಡ:
ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಮೇಲೆ ಪೊಲೀಸರು ದಾಳಿ ನಡೆಸಿ ೯೪೮ ಗ್ರಾಂ ಗಾಂಜಾ ಹಾಗೂ ಆರೋಪಿತರನ್ನು ಬಂಧಿಸಿದ ಘಟನೆ ತಾಲೂಕಿನ ಟಿಬೆಟಿಯನ್ ಕ್ಯಾಂಪ್ ನಂಬರ ೧ ಹತ್ತಿರ ಬುಧವಾರ ನಡೆದಿದೆ.
ಪಟ್ಟಣದ ಸಂದೇಶ ಕೊಕರೆ ಮತ್ತು ಮಜ್ಜಿಗೇರಿ ಗ್ರಾಮದ ರಿಯಾಜ್‌ಅಹ್ಮದ ಮುಗಳಿಗಟ್ಟಿ ಎಂಬುವರು ಬಂಧಿತ ಆರೋಪಿತರು.
ತಾಲೂಕಿನ ಟಿಬೆಟಿಯನ್ ಕ್ಯಾಂಪ್ ನಂಬರ ೧ ರ ರಸ್ತೆ ಪಕ್ಕದಲ್ಲಿ ಡಿವೋ ಸ್ಕೂಟಿಯಲ್ಲಿ ಯಾವುದೇ ಪರವಾನಗಿ ಇಲ್ಲದೆ ೯೪೮ ಗ್ರಾಂ ಇಟ್ಟುಕೊಂಡು ಮಾರಾಟ ಮಾಡುತ್ತಿದಾಗ ಖಚಿತ ಮಾಹಿತಿ ಮೇರೆಗೆ ಪಿಎಸೈಗಳಾಧ ಯಲ್ಲಾಲಿಂಗ ಕುನ್ನೂರ ಮತ್ತು ಹನಮಂತ ಕುಡಗುಂಚಿ ನೇತೃತ್ವದಲ್ಲಿ ದಾಳಿ ಮಾಡಿ ಆರೋಪಿತರ ಸಹಿತ ಗಾಂಜಾ, ಡಿವೋ ಸ್ಕೂಟಿ ಮತ್ತು ೫೫೦ ರೂಪಾಯಿ ನಗದನ್ನು ವಶಕ್ಕೆ ಪಡೆಯಲಾಗಿದೆ.
ಸಿಪಿಐ ಲೋಕಾಪುರ ನಿರ್ದೇಶನದಂತೆ ಪಿಎಸೈಗಳಾದ ಯಲ್ಲಾಲಿಂಗ ಕುನ್ನೂರ ಮತ್ತು ಹನಮಂತ ಕುಡಗುಂಚಿ ನೇತೃತ್ವದಲ್ಲಿ ಸಿಬ್ಬಂದಿಗಳು ದಾಳಿಯಲ್ಲಿ ಭಾಗಿಯಾಗಿದ್ದರು.