ಹನಿಟ್ರ್ಯಾಪ್ ಬಳಿಕ ಕೊಲೆ ಯತ್ನ: ರಾಜಣ್ಣ ಪುತ್ರನ ಕೊಲೆಗೆ ಸ್ಕೆಚ್​? ಸುಪಾರಿ ಕೊಟ್ಟಿದ್ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಚಿವ ಕೆ.ಎನ್. ರಾಜಣ್ಣ ಮಾಡಿರುವ ಹನಿಟ್ರ್ಯಾಪ್‌ ಆರೋಪ ಭಾರೀ ವಿವಾದದಲ್ಲಿದ್ದು, ಈ ನಡುವೆ ರಾಜಣ್ಣ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಮೇಲೆ ಕೊಲೆ ಯತ್ನ ನಡೆದಿದೆ ಎಂದು ಸ್ವತಃ ರಾಜೇಂದ್ರ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ರಿಗೆ ದೂರು ಕೊಟ್ಟಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿ, ಇವತ್ತು ನಾನು ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಅವರನ್ನ ಭೇಟಿ ಮಾಡಿದ್ದೇನೆ. ನವೆಂಬರ್ 16 ರಂದು ನನ್ನ ಮಗಳ ಹುಟ್ಟುಹಬ್ಬ ಇರುತ್ತದೆ. ಶ್ಯಾಮಿಯಾನದವರ ರೂಪದಲ್ಲಿ ನನ್ನ ಮರ್ಡರ್ ಮಾಡೋಕೆ ಮುಂದಾಗಿದ್ದರು. ನನಗೆ ತಡವಾಗಿ ಆ ವಿಷಯ ಗೊತ್ತಾಗಿದೆ ಎಂದರು.

ಜನವರಿಯಲ್ಲಿ ನನ್ನ ಮೇಲೆ ಕೊಲೆ ಯತ್ನ ಆಗಿರುವುದರ ಬಗ್ಗೆ ಆಡಿಯೋ ರೆಕಾರ್ಡ್ ಸಿಕ್ಕಿದೆ. ಆ ಆಡಿಯೋದಲ್ಲಿ ನನಗೆ ಸುಪಾರಿ ಕೊಟ್ಟ ಸಂದೇಶ ಇದೆ. ಆ ಆಡಿಯೋ ನಲ್ಲಿ 5 ಲಕ್ಷ ರೂಪಾಯಿಗೆ ಡೀಲ್ ಮಾಡಿದ್ದರು. ಆ ರೆಕಾರ್ಡಿಂಗ್ ನಲ್ಲಿ ಏನಿದೆ ಅನ್ನೋದರ ಬಗ್ಗೆ ನಾನು ಡಿಜಿ ಅವರಿಗೆ ಕಂಪ್ಲೇಂಟ್ ಕೊಟ್ಟಿದೀನಿ ಎಂದು ಮಾಹಿತಿ ಬಿಚ್ಚಿಟ್ಟಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!