ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಮಾನದಲ್ಲಿ ನಾಯಿ ಅಲೋ ಇಲ್ಲ ಎಂದಿದ್ದಕ್ಕೆ ಏರ್ಪೋರ್ಟ್ ಬಾತ್ರೂಮ್ನಲ್ಲಿ ತನ್ನ ನಾಯಿಯನ್ನೇ ಮಹಿಳೆ ಕೊಂದಿದ್ದಾಳೆ.
ಅಮೆರಿಕದ ವಿಮಾನ ನಿಲ್ದಾಣದಲ್ಲಿ ವಿಮಾನದಲ್ಲಿ ನಾಯಿಯನ್ನು ಕರೆದೊಯ್ಯುವಂತಿಲ್ಲ ಎಂದು ಸಿಬ್ಬಂದಿ ಹೇಳಿದ್ದಕ್ಕೆ, ಮಹಿಳೆ ಟಾಯ್ಲೆಟ್ ನೀರಿನಲ್ಲಿ ನಾಯಿಯನ್ನು ಮುಳುಗಿಸಿ ಕೊಂದಿದ್ದಾರೆ. ಸದ್ಯ 57 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ.
ಭದ್ರತಾ ಚೆಕ್ಪೋಸ್ಟ್ ಬಳಿ ಇರುವ ಶೌಚಾಲಯದಲ್ಲಿ ನಾಯಿ ಮೃತಪಟ್ಟಿರುವುದು ಆತಂಕಕ್ಕೆ ಕಾರಣವಾಗಿತ್ತು. ಮಹಿಳೆ ತನ್ನ ಶ್ವಾನದೊಂದಿಗೆ ವಿಮಾನ ಹತ್ತಲು ಪ್ರಯತ್ನಿಸಿದ್ದಳು ಆದರೆ ಅಗತ್ಯವಾದ ದಾಖಲೆಗಳ ಕೊರತೆ ಇತ್ತು.
ನಂತರ ಮಹಿಳೆ ತನ್ನ ನಾಯಿಯನ್ನು ವಿಮಾನ ನಿಲ್ದಾಣದ ಶೌಚಾಲಯದಲ್ಲಿ ಮುಳುಗಿಸಿ ಭದ್ರತಾ ಚೆಕ್ಪೋಸ್ಟ್ಗಳ ಮೂಲಕ ಹೋಗುವ ಮೊದಲು ಅದರ ಅವಶೇಷಗಳನ್ನು ಕಸದ ಪುಟ್ಟಿಗೆ ಎಸೆದಿದ್ದಳು. ವಿಮಾನ ನಿಲ್ದಾಣ ಶುಚಿಗೊಳಿಸುವ ಸಿಬ್ಬಂದಿಗೆ ನಾಯಿಯ ಶವ ಕಂಡಿತ್ತು.
ಘಟನೆ ನಡೆದ ದಿನದ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪೊಲೀಸರು ಲಾರೆನ್ಸ್ ಬಂಧನಕ್ಕೆ ವಾರಂಟ್ ಹೊರಡಿಸಿದ ನಂತರ ಅವರನ್ನು ಬಂಧಿಸಲಾಯಿತು. ಸುಮಾರು ಮೂರು ತಿಂಗಳ ನಂತರ ಅವರನ್ನು ಬಂಧಿಸಿ ವಶಕ್ಕೆ ಪಡೆಯಲಾಯಿತು. ಮಂಗಳವಾರದ ಬಂಧನದ ನಂತರ, ಬಂಧನ ದಾಖಲೆಯ ಪ್ರಕಾರ, ಅವರು 5,000 ಡಾಲರ್ ಬಾಂಡ್ ಸಲ್ಲಿಸಿದ್ದಾರೆ.