ಸ್ನೇಹಿತೆಯನ್ನು ಮೀಟ್‌ ಮಾಡೋದಕ್ಕಾಗಿ ಬುರ್ಖಾ ಧರಿಸಿ ಲೇಡಿಸ್ ಹಾಸ್ಟೆಲ್‌ಗೆ ಬಂದ ಯುವಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗೆ ಕಿಡಿಗೇಡಿಗಳು ಹೆಣ್ಣುಮಕ್ಕಳಿಗೆ ತೊಂದರೆ ಕೊಡುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಈಗ ಅಂತಹುದೇ ಮತ್ತೊಂದು ಘಟನೆ ವರದಿಯಾಗಿದೆ.

ನಿನ್ನೆ ರಾತ್ರಿ ಜ್ಞಾನಭಾರತಿ ಕ್ಯಾಂಪಸ್ ಒಳಗಡೆ ಇರುವ ರಮಬಾಯಿ ಹಾಸ್ಟೆಲ್‌ನಲ್ಲಿ ಯುವಕನೊಬ್ಬ ರಾತ್ರಿ 9 ಗಂಟೆ ಸುಮಾರಿಗೆ ಬುರ್ಖಾ ಧರಿಸಿಕೊಂಡು ಒಳಗೆ ಪ್ರವೇಶಿಸಿದ್ದಾನೆ. ಇದನ್ನು ವಿದ್ಯಾರ್ಥಿನಿಯರು ಗಮನಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ವೇಳೆ ಇಬ್ಬರು ಪೊಲೀಸರು ಬಂದು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಯುವಕ ತನ್ನ ಸ್ನೇಹಿತೆಯನ್ನ ಭೇಟಿ ಮಾಡಲು ಲೇಡಿಸ್ ಹಾಸ್ಟೆಲ್ ಗೆ ಹೋಗಿದ್ದಾನೆ. ಹುಡುಗಿಯರ ಹಾಸ್ಟೆಲ್ ಆಗಿದ್ದರಿಂದ ಆತನನ್ನು ಒಳಗೆ ಕರೆತರಲು ಸ್ನೇಹಿತೆಯೇ ಆ ಬಟ್ಟೆಯನ್ನು ನೀಡಿದ್ದಳಂತೆ ಎಂದು ವಿಚಾರಣೆ ವೇಳೆ ಬಹಿರಂಗವಾಗಿದೆ.

ಯುವಕನ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!