ನೂಪುರ್​ ಶರ್ಮಾ ಬೆಂಬಲಿಗನ ಹತ್ಯೆ: ಬರೋಬ್ಬರಿ ಒಂದು ತಿಂಗಳು 144 ಸೆಕ್ಷನ್​ ಜಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜಸ್ತಾನದಲ್ಲಿ ನೂಪುರ್​ ಶರ್ಮಾ ಪರವಾಗಿ ಪೋಸ್ಟ್​ ಹಾಕಿದ್ದ ವ್ಯಕ್ತಿಯ ಶಿರಚ್ಚೇದ ಮಾಡಿ, ಪ್ರಧಾನಿಗೆ ಜೀವ ಬೆದರಿಕೆ ಹಾಕಿದ ಘಟನೆ ದೇಶವನ್ನೇ ನಡುಗಿಸಿದ್ದು, ರಾಜಸ್ಥಾನದಲ್ಲಿ ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಇದೀಗ ಒಂದು ತಿಂಗಳವರೆಗೂ 144 ಸೆಕ್ಷನ್​ ಜಾರಿ ಮಾಡಲಾಗಿದ್ದು, ರಾಷ್ಟ್ರೀಯ ತನಿಖಾ ದಳ(ಎನ್​ಐಎ) ಅಖಾಡಕ್ಕಿಳಿದಿದೆ.
ಎನ್‌ಐಎ ತಂಡ ಡೆಪ್ಯುಟಿ ಇನ್‌ಸ್ಪೆಕ್ಟರ್ ಜನರಲ್ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿ ಉದಯಪುರಕ್ಕೆ ಆಗಮಿಸಿದೆ. ತಕ್ಷಣ ಶಾಂತಿ ನೆಲೆಸಲು ಮತ್ತು ಘಟನೆಯನ್ನು ತೀವ್ರ ತನಿಖೆ ನಡೆಸಲು ಗೃಹ ಸಚಿವಾಲಯ ಸೂಚನೆಯ ಮೇರೆಗೆ ಎನ್​ಐಎ ರಾಜ್ಯಕ್ಕೆ ಆಗಮಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!