ಗ್ಯಾಂಗಸ್ಟರ್‌ ಅತೀಕ್‌ ಅಹ್ಮದ್‌ ಹತ್ಯೆ: ಮರಣೋತ್ತರ ಪರೀಕ್ಷೆಯಲ್ಲಿ ಸಿಕ್ಕಿತು ಗುಂಡೇಟಿನ ಸಂಖ್ಯೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗ್ಯಾಂಗಸ್ಟರ್‌, ಪಾತಕಿ ಅತೀಕ್‌ ಅಹ್ಮದ್‌ (Atiq Ahmed)ಮರಣೋತ್ತರ ಪರೀಕ್ಷೆ ವರದಿಯಲ್ಲಿ ಅನೇಕ ಮಾಹಿತಿ ಹೊರಬಂದಿದ್ದು, ಗುಂಡಿನ ದಾಳಿ ವೇಳೆ ತಲೆಗೆ ಒಂದು ಗುಂಡು ಸೇರಿದಂತೆ ದೇಹವನ್ನು 9 ಗುಂಡುಗಳು ಹೊಕ್ಕಿವೆ ಎಂದು ಮಾಹಿತಿ ಸಿಕ್ಕಿದೆ.

ಗ್ಯಾಂಗ್‌ಸ್ಟರ್‌ ದೇಹದಲ್ಲಿ ಕನಿಷ್ಠ 9 ಬುಲೆಟ್ ಹೊಕ್ಕಿದ್ದವು. ಆತನ ಸಹೋದರ ಅಶ್ರಫ್ ಅಹ್ಮದ್ ದೇಹದಿಂದ 5 ಗುಂಡುಗಳನ್ನು ಹೊರತೆಗೆಯಲಾಗಿದೆ ಎಂದು ವರದಿಯಾಗಿದೆ.
ಅತೀಕ್ ಅಹ್ಮದ್ ತಲೆಗೆ ಒಂದು, ಎದೆ ಹಾಗೂ ಬೆನ್ನಿನ ಭಾಗಕ್ಕೆ ಎಂಟು ಬಾರಿ ಗುಂಡು ಹಾರಿಸಿರುವುದು ಶವಪರೀಕ್ಷೆಯಲ್ಲಿ ಪತ್ತೆಯಾಗಿದೆ. ಮೂವರು ಶೂಟರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ. ಐವರು ವೈದ್ಯರಿದ್ದ ತಂಡ ಮರಣೋತ್ತರ ಪರೀಕ್ಷೆ ನಡೆಸಿದೆ.

ಉಮೇಶ್‌ ಪಾಲ್‌ ಹತ್ಯೆ ಆರೋಪ ಪ್ರಕರಣದಲ್ಲಿ ಅತೀಕ್‌ ಅಹ್ಮದ್‌ನನ್ನು ಬಂಧಿಸಲಾಗಿತ್ತು. ಪ್ರಯಾಗ್‌ರಾಜ್‌ನ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಪೊಲೀಸರು ಕರೆತಂದಿದ್ದ ವೇಳೆ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.

ಪತ್ರಕರ್ತರ ಸೋಗಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಅತೀಕ್‌ ಅಹ್ಮದ್‌ಗೆ ಮೊದಲು ತಲೆಗೆ ಗುರಿಯಿಟ್ಟು ಗುಂಡು ಹೊಡೆದರು. ನಂತರ ಆತನ ಸಹೋದರನಿಗೂ ಗುಂಡು ಹಾರಿಸಿದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ತಕ್ಷಣ ಎಚ್ಚೆತ್ತ ಪೊಲೀಸರು ದುಷ್ಕರ್ಮಿಗಳನ್ನು ವಶಕ್ಕೆ ಪಡೆದರು. ಅಷ್ಟರಲ್ಲಾಗಲೇ ಪಾತಕಿ ಅಹ್ಮದ್‌ ಆತನ ಸಹೋದರ ಅಶ್ರಫ್‌ ರಕ್ತದ ಮಡುವಿನಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!