ನಾಲ್ಕು ವರ್ಷ ಹಿಂದೆ ನಡೆದ ಕೊಲೆ: ನ್ಯಾಯಕ್ಕಾಗಿ ಹೈಕೋರ್ಟ್ ಮೊರೆಹೋದ ಬಾಲಿವುಡ್​ ನಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕುರ್ಬಾನ್ (1991), ಜೋ ಜೀತಾ ವೋಹಿ ಸಿಕಂದರ್ (1992), ಖಿಲಾಡಿ (1992), ಮೆಹರ್ಬಾನ್ (1993), ದಲಾಲ್ (1993), ಚಿತ್ರಗಳ ಮೂಲಕ ಜನಪ್ರಿಯವಾಗಿರುವ ಬಾಲಿವುಡ್ ನಟಿ ಆಯೇಷಾ ಜುಲ್ಕಾ ತಮ್ಮ ಮುದ್ದಿನ ನಾಯಿ ರಾಕಿಯ ನಿಗೂಢ ಸಾವಿನ ಪ್ರಕರಣದ ತ್ವರಿತ ವಿಚಾರಣೆಯನ್ನು ಕೋರಿ ಬಾಂಬೆ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ.

2020 ಸೆಪ್ಟೆಂಬರ್​ನಲ್ಲಿ ಲೋನಾವಾಲಾ ಬಂಗಲೆಯಲ್ಲಿ ಆರು ವರ್ಷದ ನಾಯಿ ರಾಕಿ ಅನುಮಾನಾಸ್ಪದವಾಗಿ ಮೃತಪಟ್ಟಿತ್ತು. ನಟಿ ಕೇರ್​ ಟೇಕರ್ ರಾಮ್​ ಎಂಬಾತನ ಮೇಲೆ ಅನುಮಾನಗೊಂಡು ಪೊಲೀರಿಗೆ ದೂರು ನೀಡಿದ್ದರು. ಆದರೆ 4 ವರ್ಷ ಕಳೆದರೂ ಈ ಪ್ರಕರಣ ವಿಚಾರಣೆ ನಡೆದಿಲ್ಲ. ಹಾಗಾಗಿ ತ್ವರಿತ ವಿಚಾರಣೆ ನಡೆಸುವಂತೆ ನಟಿ ಬಾಂಬೆ ಹೈಕೋರ್ಟ್​ ಮೊರೆ ಹೋಗಿದ್ದಾರೆ.

ನಟಿ ಆಯೇಷಾ ಜುಲ್ಕಾರ ಮುದ್ದು ನಾಯಿ ರಾಕಿ ಸೆ. 13, 2020 ರಂದು ಅನುಮಾನಾಸ್ಪದವಾಗಿ ಮೃತಪಟ್ಟಿತ್ತು. ಕೇರ್ ಟೇಕರ್ ರಾಮ್ ನೀರಿನಲ್ಲಿ ಮುಳುಗಿ ಸತ್ತಿದೆ ಎಂದು ಹೇಳಿದ್ದ. ಆದರೆ ಅನುಮಾನಗೊಂಡ ನಟಿ ನಾಯಿಯ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದರು. ವೈದ್ಯರು ನಾಯಿಯನ್ನು ಕತ್ತು ಹಿಸುಕಿ ಉಸಿರುಗಟ್ಟಿಸಿದ್ದರಿಂದ ಸಾವನ್ನಪ್ಪಿದೆ ಎಂದು ವರದಿ ನೀಡಿದ್ದರು. ಜೊತೆಗೆ ನಾಯಿ ನೀರಿನಲ್ಲಿ ಮುಳುಗಿ ಸತ್ತಿರುವುದಕ್ಕೆ ಯಾವುದೇ ಪುರಾವೆ ಸಿಕ್ಕಿರಲಿಲ್ಲ.

ಕುಡಿದ ಅಮಲಿನಲ್ಲಿ ನಾಯಿಯನ್ನು ಕತ್ತು ಹಿಸುಕಿ ಕೊಂದಿರುವುದಾಗಿ ಆತ ಪೊಲೀಸರ ಬಳಿ ಒಪ್ಪಿಕೊಂಡಿದ್ದರಿಂದ ಸೆಪ್ಟೆಂಬರ್ 25 ರಂದು ಈತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 429, ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿ ಆಂಡ್ರೆಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಆದರೆ ಎರಡು ದಿನಗಳ ನಂತರ ಆತನಿಗೆ ಜಾಮೀನು ಮಂಜೂರಾಗಿ ಬಿಡುಗಡೆಯಾಗಿದ್ದಾರೆ.

ಜನವರಿ 7, 2021 ರಂದು, ಮಾವಲ್ ಪೊಲೀಸರು ಈ ಪ್ರಕರಣದಲ್ಲಿ ಚಾರ್ಜ್ ಶೀಟ್ ಅನ್ನು ಸಹ ಸಲ್ಲಿಸಿದ್ದರು. ಆದರೆ ಅಂದಿನಿಂದ ಪ್ರಕರಣ ಬಾಕಿ ಉಳಿದುಕೊಂಡಿದೆ. ತನಿಖೆಯ ಸಮಯದಲ್ಲಿ, ರಕ್ತದ ಕಲೆಯಿದ್ದ ಬೆಡ್ ಶೀಟ್ ಅನ್ನು ಪುಣೆಯ ಫೋರೆನ್ಸಿಕ್ ಲ್ಯಾಬ್‌ಗೆ ಕಳುಹಿಸಲಾಗಿದೆ. ಅದರ ವರದಿ ಇನ್ನೂ ಬಂದಿಲ್ಲ. ವರದಿ ಸಂಗ್ರಹಿಸಲು ಸಿಬ್ಬಂದಿ ಇಲ್ಲ ಎಂದು ಜುಲ್ಕಾ ಕಾನೂನು ತಂಡಕ್ಕೆ ಮೌಖಿಕವಾಗಿ ತಿಳಿಸಿದ್ದಾರೆ.

ನಟಿ ಜುಲ್ಕಾ ತಮ್ಮ ನೀಡಿರುವ ದೂರಿನ ಮೇಲೆ ಕಾನೂನು ಕ್ರಮ ಜರುಗಿಸಲು ಸರ್ಕಾರಿ ವಕೀಲರು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಪ್ರಾಸಿಕ್ಯೂಷನ್ ಡೈರೆಕ್ಟರೇಟ್, ಮುಂಬೈಗೆ ದೂರು ನೀಡಿದ್ದಾರೆ. ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಜುಲ್ಕಾ ಇದೀಗ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಶುಕ್ರವಾರದ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿ ರೇವತಿ ಮೋಹಿತೆ ಡೇರೆ ಮತ್ತು ನ್ಯಾಯಮೂರ್ತಿ ಮಂಜುಷಾ ದೇಶಪಾಂಡೆ ಅವರನ್ನೊಳಗೊಂಡ ಪೀಠವು ಏಕಸದಸ್ಯ ಪೀಠವು ಪ್ರಕರಣವನ್ನು ಆಲಿಸಬೇಕು ಎಂದು ಗಮನಕ್ಕೆ ಬಂದ ನಂತರ ಮುಂದಿನ ವಿಚಾರಣೆಗಾಗಿ ಏಕ ಪೀಠವನ್ನು ಸಂಪರ್ಕಿಸುವಂತೆ ಜುಲ್ಕಾಗೆ ಸೂಚಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!