ಅಯೋಧ್ಯೆ ನಗರಿಯಲ್ಲಿ ರಾಮ ನವಮಿ ಸಂಭ್ರಮ: ರಾಮಲಲಾನಿಗೆ ಸೂರ್ಯ ಕಿರಣ ಅಭಿಷೇಕ ಪ್ರಯೋಗ ಸಕ್ಸಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆ (ayodhya) ರಾಮಮಂದಿರ (ram mandir) ರಾಮನ ಜನ್ಮದಿನ ರಾಮ ನವಮಿ (ram navami) ಉತ್ಸವಕ್ಕೆ ಸಜ್ಜಾಗುತ್ತಿದೆ. ಹೀಗಾಗಿ ತಯಾರಿ ಕಾರ್ಯಗಳು ಜೋರಾಗಿಯೇ ನಡೆಯುತ್ತಿದೆ.

ಇದೀಗ ರಾಮ ನವಮಿಗೆ ಮುಂಚಿತವಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಅಯೋಧ್ಯೆಯೊಳಗಿನ ಶ್ರೀ ರಾಮಲಲಾ ವಿಗ್ರಹಕ್ಕೆ ಎರಡನೇ ಬಾರಿ ಯಶಸ್ವಿಯಾಗಿ ಸೂರ್ಯ ತಿಲಕ ಅಥವಾ ಸೂರ್ಯಾಭಿಷೇಕವನ್ನು ನಡೆಸಲಾಗಿದೆ. ಇದರ ವಿಡಿಯೋವನ್ನು ಉತ್ತರಪ್ರದೇಶದ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಹಂಚಿಕೊಂಡಿದ್ದಾರೆ.

ಏಪ್ರಿಲ್ 17ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮನವಮಿಗೆ ಮುಂಚಿತವಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಶುಕ್ರವಾರ ಅಯೋಧ್ಯೆಯ ಭವ್ಯ ಮಂದಿರದಲ್ಲಿ ಎರಡನೇ ಬಾರಿಗೆ ರಾಮಲಲಾನಿಗೆ ‘ಸೂರ್ಯ ಅಭಿಷೇಕ’ವನ್ನು ಯಶಸ್ವಿಯಾಗಿ ನಡೆಸಿತು.

ಈ ಹಿಂದೆ ಏಪ್ರಿಲ್ 8ರಂದು ಮೊದಲ ಬಾರಿಗೆ ಇದರ ಪ್ರಯೋಗ ನಡೆಸಲಾಗಿತ್ತು. ರಾಮ್ ಲಲಾ ಜನ್ಮದಿನವಾದ ರಾಮನವಮಿಯಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿರುವ ಸೂರ್ಯಾಭಿಷೇಕ ಅಥವಾ ಸೂರ್ಯ ತಿಲಕದ ಸಂದರ್ಭವನ್ನು ಸಾರ್ವಜನಿಕ ಪ್ರಸಾರಕ ಪ್ರಸಾರ ಭಾರತಿ ನೇರ ಪ್ರಸಾರ ಮಾಡಲಿದೆ. ಈ ಹಿನ್ನೆಲೆಯಲ್ಲಿ ಅದಕ್ಕೂ ಮುನ್ನ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ.

https://twitter.com/brajeshpathakup/status/1778767577071923498

ಈ ಯಶಸ್ವಿ ಪ್ರಯೋಗದ ಶ್ರೇಯಸ್ಸು ವಿಜ್ಞಾನಿಗಳಿಗೆ ಸಲ್ಲಬೇಕು. ಪೂರ್ಣ ಪ್ರಭೆಯಲ್ಲಿ ಸೂರ್ಯನ ಕಿರಣಗಳು ರಾಮ್ ಲಲಾನ ಹಣೆಯ ಮೇಲೆ ಬಿದ್ದವು. ಇದು ರಾಮನವಮಿಯ ಪ್ರಮುಖ ಕಾರ್ಯಕ್ರಮವಾಗಿದ್ದು, ಆ ದಿನ ಅದ್ಧೂರಿಯಾಗಿ ನಡೆಯಲಿದೆ ಎಂದುಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ತಿಳಿಸಿದ್ದಾರೆ.

ಸೂರ್ಯ ತಿಲಕದ ಪ್ರಯೋಗವನ್ನು ನಡೆಸಿದ ರೂರ್ಕಿಯ ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸಿಬಿಆರ್‌ಐ) ತಜ್ಞರು ರಾಮ ನವಮಿಯಂದು ‘ಸೂರ್ಯ ಅಭಿಷೇಕ’ ಯಶಸ್ವಿ ನೆರವೇರಿಸಲು ಅಯೋಧ್ಯೆಯಲ್ಲೇ ಉಪಸ್ಥಿತರಿದ್ದಾರೆ. ಸಿಬಿಆರ್ ಐ ಯ ನಿರ್ದೇಶಕ ರೂರ್ಕಿ, ಪ್ರೊ. ಪ್ರದೀಪ್ ಕುಮಾರ್ ರಾಮಂಚಾರ್ಲಾ ಮತ್ತು ಪ್ರೊ. ದೇವದತ್ ಘೋಷ್ ಸೂರ್ಯ ತಿಲಕ ಯೋಜನೆಯ ಮೇಲ್ವಿಚಾರಣೆ ನಡೆಸಲಿದ್ದಾರೆ.

ರಾಮನವಮಿಯಂದು ಮಧ್ಯಾಹ್ನ 12 ಗಂಟೆಗೆ ಸೂರ್ಯನ ಕಿರಣಗಳು ದೇವರ ಮೇಲೆ ಎರಡರಿಂದ ಎರಡೂವರೆ ನಿಮಿಷಗಳ ಕಾಲ ಪೂರ್ಣ ಪ್ರಮಾಣದಲ್ಲಿ ಬೀಳಲಿದೆ. ಬಳಿಕ ಮತ್ತೆ ಎರಡೂವರೆ ನಿಮಿಷ ಭಾಗಶಃ ಬೀಳುತ್ತದೆ ಎಂದು ಆರ್‌ಎಸ್‌ಎಸ್ ಹಿರಿಯ ನಾಯಕ ಗೋವಿಂದ್ ರಾವ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!