ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಕೇಸ್: ಪೊಲೀಸರಿಂದ 347 ಪುಟದ ಚಾರ್ಚ್‌ ಶೀಟ್‌ ಸಲ್ಲಿಕೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಕೇಸ್ ದಾಖಲಾದ ನಂತ್ರ, ಶ್ರೀಗಳು ಜೈಲು ಪಾಲಾಗಿದ್ದಾರೆ. ಈ ಪ್ರಕರಣದಲ್ಲಿ ಎ.1 ಆರೋಪಿಯನ್ನಾಗಿ ಮುರುಘಾ ಶ್ರೀಗಳನ್ನು ಮಾಡಲಾಗಿದೆ. ಇಂತಹ ಪ್ರಕರಣ ಸಂಬಂಧ ಇಂದು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.

ಇಂದು ಚಿತ್ರದುರ್ಗ ಪೊಲೀಸರು ಜಿಲ್ಲಾ 2ನೇ ಸೆಷನ್ ಕೋರ್ಟ್ ಗೆ ಮುರುಘಾ ಶ್ರೀಗಳ ವಿರುದ್ಧದ ಪೋಕ್ಸೋ ಕೇಸ್ ಪ್ರಕರಣ ಸಂಬಂಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವಂತ ಚಾರ್ಜ್ ಶೀಟ್ ನಲ್ಲಿ ಎ.1 ಮುರುಘಾ ಶ್ರೀಗಳ ವಿರುದ್ಧ ಬರೋಬ್ಬರಿ 347 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿರೋದಾಗಿ ತಿಳಿದು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!