‘ಟ್ವೀಟರ್ ಬ್ಲೂಟಿಕ್ ತಡೆಹಿಡಿದ ಮಸ್ಕ್’: ಇಲ್ಲಿದೆ ಸಂಭವನೀಯ ಕಾರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಟ್ವೀಟರ್‌ ನ ನೂತನ ಮಾಲೀಕ ಬಿಲಿಯನೇರ್ ಎಲಾನ್‌ ಮಸ್ಕ್‌ ಟ್ವೀಟರ್‌ ಬ್ಲೂಟಿಕ್‌ ಚಂದಾದಾರಿಕೆಯನ್ನು ಅನಿರ್ದಿಷ್ಟಾವಧಿಯವರೆಗೆ ತಡೆ ಹಿಡಿದಿದ್ದಾರೆ. ಈ ಹಿಂದೆ ತಿಂಗಳಿಗೆ 8 ಡಾಲರ್‌ ಪಾವತಿಸಿ ಬ್ಲೂಟಿಕ್‌ ಸೇವೆ ನೀಡುವುದಾಗಿ ಎಲಾನ್‌ ಮಸ್ಕ್‌ ಘೋಷಿಸಿದ್ದರು. ಕಳೆದ ವಾರವಷ್ಟೇ ಶೀಘ್ರದಲ್ಲಿಯೇ ಬ್ಲೂಟಿಕ್‌ ಸೇವೆ ಮರುಜಾರಿಗೊಳ್ಳುತ್ತದೆ ಎಂದೂ ಘೋಷಿಸಿದ್ದರು. ಆದರೆ ಈಗ ಅವರು ಬ್ಲೂಟಿಕ್‌ ಸೇವೆಯನ್ನು ತಡೆಹಿಡಿದಿರುವುದಾಗಿ ಹೇಳಿದ್ದಾರೆ.

ಈ ಕುರಿತು ಮಸ್ಕ್‌ ಟ್ವೀಟ್‌ ಮಾಡಿದ್ದು “ನಕಲಿ ಖಾತೆಗಳನ್ನು ಪರಿಣಾಮಕಾರಿಯಾಗಿ ತಡೆಹಿಡಿಯುವವರೆಗೆ ಬ್ಲೂಟಿಕ್‌ ಚಂದಾದಾರಿಕೆ ತಡೆ ಹಿಡಿಯಲಾಗುಯತ್ತದೆ. ಅಲ್ಲದೇ ವ್ಯಕ್ತಿಗತ ಖಾತೆಗಳಿಗಿಂತ ಸಂಸ್ಥೆಯ ಖಾತೆಗಳಿಗೆ ಬೇರೆ ಬಣ್ಣದ ಗುರುತು ಚೆಕ್‌ ಬಳಸಲಾಗುತ್ತದೆ” ಎಂದಿದ್ದಾರೆ.

ಟ್ವೀಟರ್‌ ನಲ್ಲಿ ನಕಲಿ ಖಾತೆಗಳನ್ನು ಮಟ್ಟ ಹಾಕುವುದಾಗಿ ಮಸ್ಕ್‌ ಈ ಹಿಂದೆ ಘೋಷಿಸಿದ್ದರು. ಆ ಕುರಿತಂತೆ ಅವರೀಗ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲ ನಕಲಿ ಖಾತೆಗಳೂ ಕೂಡ ಶುಲ್ಕ ಪಾವತಿಸಿ ಬ್ಲೂಟಿಕ್‌ ಪಡೆಯಬಹುದಾದ ಸಂಭವವಿದ್ದು ಇದಕ್ಕಾಗಿ ನಕಲಿ ಖಾತೆಗಳನ್ನು ಪರಿಣಾಮಕಾರಿಯಾಗಿ ಮಟ್ಟ ಹಾಕುವವರೆಗೆ ಬ್ಲೂಟಿಕ್‌ ಅನ್ನು ತಡೆಹಿಡಿಯುವುದಾಗಿ ಮಸ್ಕ್‌ ಘೋಷಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!