ಟ್ವೀಟರ್‌ ಆಯ್ತು ಇನ್ನು ಕೋಕಾ ಕೋಲಾ ಖರೀದಿಸುತ್ತಾರಂತೆ ಮಸ್ಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟ್ವೀಟರ್‌ ಅನ್ನು 44 ಬಿಲಿಯನ್‌ ಡಾಲರ್‌ ಗೆ ಖರೀದಿಸಿ ಇನ್ನೂ ಒಂದುವಾರ ಕಳೆದಿಲ್ಲ ಆಗಲೇ ಎಲಾನ್‌ ಮಸ್ಕ್‌ ಮತ್ತೊಂದು ಘೋಷಣೆ ಮಾಡಿದ್ದಾರೆ. ಪ್ರಸಿದ್ಧ ತಂಪುಪಾನೀಯ ಕಂಪನಿ ಕೋಕಾ ಕೋಲಾವನ್ನು ಖರೀದಿಸುತ್ತೇನೆ ಎಂದು ಮಸ್ಕ್‌ ಟ್ವೀಟ್‌ ಮಾಡಿರುವುದು ವೈರಲ್‌ ಆಗಿದೆ.

“ಕೋಕಾ ಕೋಲಾವನ್ನು ಖರೀದಿಸಿ ಅದರಲ್ಲಿ ಕೋಕೇನನ್ನು ಪುನಃ ಸೇರಿಸುತ್ತೇನೆ” ಎಂದು ಹೇಳಿರುವ ಅವರ ಟ್ವೀಟ್‌ ಎರಡು ಗಂಟೆಗಳಲ್ಲಿ 1 ಮಿಲಿಯನ್ ಲೈಕ್‌ಗಳು, 2 ಲಕ್ಷ ರಿಟ್ವೀಟ್‌ಗಳು ಮತ್ತು 60ಸಾವಿರ ಕೋಟ್ ಗಳನ್ನು ದಾಟಿದೆ. ಅವರ ಈ ಟ್ವೀಟ್‌ ʼಜೋಕ್‌ʼ ಆಗಿದ್ದರೂ ದೂರದೃಷ್ಟಿಯಲ್ಲಿ ಸತ್ಯವಾಗಬಹುದು ಎಂಬುದು ನೆಟ್ಟಿಗರ ಅಭಿಪ್ರಾಯ. ಏಕೆಂದರೆ ಮಸ್ಕ್‌ ಐದು ವರ್ಷಗಳ ಹಿಂದೆಯೇ ಟ್ವೀಟರ್‌ ನ ಬೆಲೆಯೆಷ್ಟು ಎಂದು ಕೇಳಿದ್ದರು, ಆ ಸಂದರ್ಭದಲ್ಲಿ ʼಜೋಕ್‌ʼ ಆಗಿ ಕಂಡರೂ ಅದೀಗ ನಿಜವಾಗಿದೆ.

ಆದರೆ ಸದ್ಯಕ್ಕಂತೂ ಇದು ಸಾಧ್ಯವಿಲ್ಲದ ಮಾತು, ಸಾಫ್ಟ್‌ ಡ್ರಿಂಕ್ಸ್‌ ದಿಗ್ಗಜ ಕೋಕಾಕೋಲಾದ ಮಾರುಕಟ್ಟೆ ಕ್ಯಾಪಿಟಲ್‌ 284 ಬಿಲಿಯನ್‌ ಡಾಲರುಗಳಷ್ಟಿದೆ. ಮಸ್ಕ್‌ ಅವರ ಪ್ರಸ್ತುತ ಸ್ವಂತ ಆಸ್ತಿ 254 ಬಿಲಿಯನ್‌. ಇದು ಸದ್ಯಕಂತೂ ಸತ್ಯವಾಗದ ಮಾತಾಗಿರುವುದರಿಂದ  ʼಜೋಕ್‌ʼ ಎಂದೇ ಹಲವರು ಪರಿಗಣಿಸಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!