ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಸರಸಂಘಚಾಲಕರಾದ ಮೋಹನ್ ಭಾಗ್ವತ್ ಅವರನ್ನು ಭೇಟಿ ಮಾಡಿದ್ದ ಮುಸ್ಲಿಂ ಸಂಘಟನೆಯ ಮುಖ್ಯಸ್ಥರು ತಮಗೆ ವಿದೇಶದಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಿದ್ದಾರೆ.
ಆಲ್ ಇಂಡಿಯಾ ಇಮಾಮ್ ಸಂಘಟನೆಯ ಮುಖ್ಯಸ್ಥ ಉಮರ್ ಅಹ್ಮದ್ ಇಲ್ಯಾಸಿ ಇತ್ತೀಚೆಗಷ್ಟೇ ಆರೆಸ್ಸೆಸ್ ನ ಮೋಹನ್ ಭಾಗ್ವತ್ ಅವರನ್ನು ಭೇಟಿ ಮಾಡಿದ್ದರು. ಭಾಗವತ್ ಅವರು ದೆಹಲಿಯ ಮಸೀದಿಗೆ ಭೇಟಿ ನೀಡಿದಾಗ, ಮುಸ್ಲಿಂ ಸಮುದಾಯದ ತಮ್ಮ ಸಂಪರ್ಕದ ಭಾಗವಾಗಿ ಅವರು ಸಂವಾದ ನಡೆಸಿದ್ದರು. ಇದರ ನಂತರ ಇಲ್ಯಾಸಿಯವರು ಭಾಗ್ವತ್ ಅವರನ್ನು ರಾಷ್ಟ್ರಪಿತ ಎಂದು ಹೊಗಳಿದ್ದರು. ಈ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಸಂಖ್ಯೆಗಳಿಂದ ತನಗೆ ಪದೇ ಪದೇ ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ಇಲ್ಯಾಸಿ ಹೇಳಿದ್ದಾರೆ. ಅದರಲ್ಲಿ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗುತ್ತಿದೆ ಎಂದಿದ್ದಾರೆ.