ಅಪ್ಘಾನಿಸ್ತಾನದ ಶಿಕ್ಷಣ ಕೇಂದ್ರದಲ್ಲಿ ಆತ್ಮಾಹುತಿ ಬಾಂಬ್‌ ದಾಳಿ: 100 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಅಪ್ಘಾನಿಸ್ತಾನದ ಶಿಕ್ಷಣ ಕೇಂದ್ರವೊಂದರಲ್ಲಿ ಆತ್ಮಾಹುತಿ ಬಾಂಬ್‌ ದಾಳಿ ನಡೆದಿದ್ದು ಈ ಘಟನೆಯಲ್ಲಿ 100 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ವರದಿಗಳ ಪ್ರಕಾರ ಕಾಬೂಲ್‌ ನಗರದ ಪಶ್ಚಿಮದಲ್ಲಿರುವ ದಷ್ಟ್-ಎ-ಬರ್ಚಿ ಪ್ರದೇಶದ ಕಾಜ್ ಶಿಕ್ಷಣ ಕೇಂದ್ರದಲ್ಲಿ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಇದರಲ್ಲಿ ಅಪ್ಘಾನಿಸ್ತಾನದ ಮೂರನೇ ಅತಿದೊಡ್ಡ ಜನಾಂಗೀಯ ಗುಂಪಾದ ಹಜಾರಾಗಳು ಹಾಗೂ ಶಿಯಾ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳೇ ಇದ್ದಾರೆ ಎಂದು ಮೂಲಗಳು ಉಲ್ಲೇಖಿಸಿವೆ.

ಸ್ಫೋಟದ ಮೊದಲು ಗುರಿಯಾದ ವಿದ್ಯಾರ್ಥಿಗಳ ವರ್ಗವನ್ನು ತೋರಿಸುವ ವೀಡಿಯೊವನ್ನು ಮೈಕ್ರೋ-ಬ್ಲಾಗಿಂಗ್ ಸೈಟ್ ಟ್ವಿಟರ್‌ನಲ್ಲಿ ಸಹ ಹಂಚಿಕೊಳ್ಳಲಾಗಿದೆ.

“ಇದುವರೆಗೆ ನಮ್ಮ ವಿದ್ಯಾರ್ಥಿಗಳ 100 ಮೃತ ದೇಹಗಳನ್ನು ಎಣಿಕೆ ಮಾಡಿದ್ದೇವೆ. ಕೊಲ್ಲಲ್ಪಟ್ಟ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಪಶ್ಚಿಮ ಕಾಬೂಲ್‌ನ ದಷ್ಟೆ ಬರ್ಚೆ ನಿರಂತರವಾಗಿ ಮಾರಣಾಂತಿಕ ISKP ದಾಳಿಯ ಗುರಿಯಾಗಿದೆ. ಹಜಾರಾಗಳು ಮತ್ತು ಶಿಯಾಗಳನ್ನು ಅವರ ತರಗತಿಯೊಳಗೆ ಹತ್ಯೆ ಮಾಡಲಾಗಿದೆ” ಎಂದು ವಿದೇಶಿ ಪತ್ರಕರ್ತರೊಬ್ಬರು ಟ್ವೀಟ್‌ ಮಾಡಿರುವುದನ್ನು ಮೂಲಗಳು ಉಲ್ಲೇಖಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!