‘ಅಲ್ಲಾಹು ಅಕ್ಬರ್’ ಎಂದು ಕೂಗುತ್ತ ಗೋರಖನಾಥ ಮಂದಿರ ನುಗ್ಗಲು ಯತ್ನಿಸಿದ ಯುವಕ

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಮುಸ್ಲಿಂ ಯುವಕನೊಬ್ಬ ಏಪ್ರಿಲ್ 3ರಂದು ಸಂಜೆ 7.45ರ ಸುಮಾರಿಗೆ ಉತ್ತರ ಪ್ರದೇಶದ ಗೋರಖನಾಥ ಮಂದಿರಕ್ಕೆ ನುಗ್ಗಲೆತ್ನಿಸಿದ ಘಟನೆ ನಡೆದಿದೆ.

ಅಹ್ಮದ್ ಮುರ್ತಜಾ ಅಬ್ಬಾಸಿ ಎಂಬ ಯುವಕ ಗೋರಖನಾಥ ಮಂದಿರದ ಪ್ರವೇಶದ ಬಳಿ ಮೊದಲು ತಪಾಸಣೆಗೆ ಒಳಗಾಗುವುದನ್ನು ವಿರೋಧಿಸಿದ್ದಾನೆ. ನಂತರ ಹರಿತವಾದ ಆಯುಧ ತೆಗೆದು ಪೊಲೀಸರ ವಿರುದ್ಧ ಪ್ರಯೋಗಿಸಿ ಇಬ್ಬರನ್ನು ಗಾಯಗೊಳಿಸಿದ್ದಾನೆ. ಈ ವೇಳೆ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಕೊನೆಗೆ ಇಬ್ಬರು ಪೊಲೀಸರು ಈತನನ್ನು ಕಟ್ಟಿಹಾಕುವುದರಲ್ಲಿ ಯಶಸ್ವಿಯಾದರು. ವರದಿಗಳ ಪ್ರಕಾರ ಈತ ಐಐಟಿ ಬಾಂಬೆಯಲ್ಲಿ ರಾಸಾಯನಿಕ ಎಂಜಿನಿಯರಿಂಗ್ ಪದವೀಧರ. ಸಿಕ್ಕಿಬಿದ್ದ ನಂತರ ವಿಚಾರಣೆಯಲ್ಲಿ ತಾನು ಕೌಟುಂಬಿಕ ಸಮಸ್ಯೆಗಳಿಂದ ಮಾನಸಿಕ ಅಸ್ವಸ್ಥನಾಗಿದ್ದು, ಈ ಕೃತ್ಯ ಮಾಡುವಂತಾಯಿತು ಎಂದು ಹೇಳಿದ್ದಾನೆ.

ಈತನ ಈ ಹೇಳಿಕೆಯನ್ನು ಏಕಾಏಕಿ ನಂಬಬಾರದು ಎಂದು ಸಾಮಾಜಿಕ ಮಾಧ್ಯಮದಲ್ಲಿ ವಾದವೂ ಎದ್ದಿದೆ. ಇದು ಕಾನೂನು-ಸುವ್ಯವಸ್ಥೆ ಭಂಗದ ದೊಡ್ಡ ಸಂಚೇ ಆಗಿರಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇದಕ್ಕೆ ಇಂಬು ಕೊಡುವಂತೆ, ಅಹ್ಮದ್ ಜತೆ ಇನ್ನೂ ಒಬ್ಬ ಮುಸ್ಲಿಂ ಯುವಕನಿದ್ದ ಹಾಗೂ ಈತನನ್ನು ಪೊಲೀಸರು ವಶಪಡಿಸಿಕೊಳ್ಳುತ್ತಿದ್ದಂತೆ ಆತ ಓಡಿಹೋಗಿದ್ದಾನೆ ಎಂಬ ಬಗ್ಗೆ ಪುರಾವೆಗಳು ಲಭ್ಯವಾಗಿವೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥರೇ ಮಹಾಂತರಾಗಿರುವ ದೇವಾಲಯವು ಗೋರಖನಾಥ ಮಂದಿರ ಎಂಬುದಿಲ್ಲಿ ಗಮನಾರ್ಹ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!