Sunday, December 3, 2023

Latest Posts

ದರೋಡೆ, ಅತ್ಯಾಚಾರ, ಲೂಟಿ ಮಾಡುವುದರಲ್ಲಿ ಮುಸ್ಲಿಮರು ನಂಬರ್ ಒನ್: ವಿವಾದಿತ ಹೇಳಿಕೆ ನೀಡಿದ ಮುಸ್ಲಿಂ ಮುಖಂಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮುಸ್ಲಿಮರು ದರೋಡೆ, ಅತ್ಯಾಚಾರ, ಲೂಟಿ ಮಾಡುವುದರಲ್ಲಿ ನಾವೇ ನಂಬರ್ ಒನ್ ಎಂದು ಆಲ್ ಇಂಡಿಯಾ ಯುನೈಡೆಟ್ ಡೆಮಾಕ್ರಟಿಕ್ ಫ್ರಂಟ್ (AIUDF) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ (Badruddin Ajmal) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಮುಸ್ಲಿಮರು ದರೋಡೆ, ಅತ್ಯಾಚಾರ. ಸುಲಿಗೆಯಂತಹ ಎಲ್ಲಾ ಅಪರಾಧಗಳಲ್ಲಿ ನಂಬರ್ ಒನ್ ಆಗಿದ್ದೇವೆ. ಜೈಲಿಗೆ ಹೋಗುವುದರಲ್ಲಿಯೂ ನಾವೇ ನಂಬರ್ ಒನ್ ಎಂದು ಹೇಳಿ ಪೇಚಿಗೆ ಸಿಲುಕಿದ್ದಾರೆ.

ಅಜ್ಮಲ್ ಹೇಳಿಕೆಯ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಪರ ವಿರೋಧ ಚರ್ಚೆಗಳು ಕೂಡ ಹುಟ್ಟಿಕೊಂಡಿದೆ. ಅಲ್ಲದೆ ಮುಸ್ಲಿಂ ಸಂಘಟನೆಗಳ ನಾಯಕರು, ಧಾರ್ಮಿಕ ಗುರುಗಳೇ ಅಜ್ಮಲ್ ಹೇಳಿಕೆಯನ್ನು ಖಂಡಿಸಿದ್ದಾರೆ.

ಈ ಬೆನ್ನಲ್ಲೇ ಅಜ್ಮಲ್ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ತಮ್ಮ ಹೇಳಿಕೆಯನ್ನು ಒಪ್ಪಿಕೊಂಡಿರುವ ಅವರು, ನನ್ನ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಶಿಕ್ಷಣದ ಕೊರತೆಯಿಂದ ಜನ ಈ ರೀತಿಯ ಕೃತ್ಯಗಳಿಗೆ ಮುಂದಾಗುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!