ಪ್ರಪಂಚದಾದ್ಯಂತ ಮುಸ್ಲೀಮರನ್ನು ಹಿಂಸಾಚಾರಕ್ಕೆ ಗುರಿಪಡಿಸಲಾಗುತ್ತಿದೆ: ಜಿಯೋ ಬೈಡೆನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಗತ್ತಿನಾದ್ಯಂತ ಹಿಂಸಾಚಾರಕ್ಕೆ ಮುಸ್ಲೀಮರನ್ನು ಗುರಿಪಡಿಸಲಾಗುತ್ತಿರುವುದು ಖೇದಕರ ಸಂಗತಿ. ಅವರು ವೈಯುಕ್ತಿಕವಾಗಿ ಸಮಾಜದಲ್ಲಿ ಸವಾಲುಗಳು ಮತ್ತು ಬೆದರಿಕೆಗಳನ್ನು ಎದುರಿಸುತ್ತಿರುವಾಗಲೂ ಅಮೇರಿಕದ ಏಳ್ಗೆಗೆ ಅವರು ಶ್ರಮಿಸುತ್ತಿದ್ದಾರೆ. ಆ ಮೂಲಕ ಅಮೆರಿಕವನ್ನು ಗಟ್ಟಿಗೊಳಿಸುತ್ತಿದ್ದಾರೆ ಎಂದು ಅಮೆರಿಕದ ಅಧ್ಯಕ್ಷ ಜಿಯೋ ಬೈಡೆನ್‌ ಅಭಿಪ್ರಾಯಪಟ್ಟಿದ್ದಾರೆ.

ಶ್ವೇತ ಭವನದಲ್ಲಿ ಈದ್-ಉಲ್-ಫಿತ್ರ್‌ ಆಚರಿಸಿದ ಅವರು “ಪ್ರಪಂಚದಲ್ಲಿ ಮುಸ್ಲೀಮರನ್ನು ಹಿಂಸಾಚಾರಕ್ಕೆ ಗುರಿಪಡಿಸುತ್ತಿರುವುದು ಕಳವಳದ ಸಂಗತಿ. ಯಾರೂ ಕೂಡ ಇನ್ನೊಬ್ಬರ ಕುರಿತು ತಾರತಮ್ಯ ಮಾಡಬಾರದು. ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ ಇನ್ನೊಬ್ಬರನ್ನು ತುಳಿಯಬಾರದು” ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ರಾಯಭಾರಿಯಾಗಿ ಸೇವೆ ಸಲ್ಲಿಸಲು ಮುಸ್ಲೀಂ ಒಬ್ಬರನ್ನು ನೇಮಿಸಲಾಗಿದೆ ಎಂದು ಅವರು ಘೋಷಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!