ಹೊಸದಿಗಂತ ವರದಿ,ಮೈಸೂರು:
ಮುಸ್ಲೀಮರಲ್ಲಿ ಶೌರ್ಯವಿಲ್ಲ ಗುಣವಿಲ್ಲ ಕ್ರೌರ್ಯವಿದೆ ಎಂದು ಸಂಸದ ಪ್ರತಾಪ್‌ಸಿಂಹ ಹೇಳಿದರು.
ಇತಿಹಾಸದಲ್ಲಿ ಯಾರು ಹೋರಾಟ ಮಾಡಿದ್ದಾರೆ ತೋರಿಸಿ, ಯುದ್ಧದಲ್ಲಿ ಕುತಂತ್ರ ಮಾಡಿ, ದ್ರೋಹ ಬಗೆದು ಗೆದ್ದಿದ್ದಾರೆ. ನೇರವಾಗಿ ಖಡ್ಗ ಹಿಡಿದು ಹೋರಾಟ ಮಾಡಿಲ್ಲ ಹಾಗಾಗಿ ಮುಸ್ಲೀಮರಲ್ಲಿ ಶೌರ್ಯದ ಗುಣವಿಲ್ಲ, ಕ್ರೌರ್ಯದ ಗುಣವಿದೆ. ಹೈದರಾಲಿ ಬಳಿಕ ಟಿಪ್ಪು ಆಡಳಿತ ನಡೆಸಿದ 10 ವರ್ಷದಲ್ಲಿ ಒಂದೇ ಒಂದು ಯುದ್ಧವನ್ನೂ ಖಡ್ಗವಿಡದು ನೇರವಾಗಿ ಮಾಡಲಿಲ್ಲ, ಯುದ್ಧವನ್ನು ಮುನ್ನೇಡಸಲಿಲ್ಲ. ಯಾರನ್ನೂ ಗೆಲ್ಲಲಿಲ್ಲ, ತನ್ನನ್ನು ತಾನೇ ಸುಲ್ತಾನ ಎಂದು ಘೋಷಿಸಿಕೊಂಡ. ಆತ ಎಂದೂ ಬರಿಗೈಯಲ್ಲಿ ಹುಲಿಯನ್ನು ಕೊಂದಿಲ್ಲ. ಆದರೆ ಆತ ಬರಿಗೈಯಲ್ಲಿ ಹುಲಿಯನ್ನು ಕೊಂದ ಎಂದು ಪಠ್ಯಪುಸ್ತಕದಲ್ಲಿ ಸುಳ್ಳನ್ನು ತುಂಬಿದ್ದರು.
ಅದನ್ನು ಓದಿಕೊಂಡು ನಾವು ಪರೀಕ್ಷೆ ಬರೆದಿದ್ದೇನೆ. ಆದರೆ ಬರಿಗೈಯಲ್ಲಿ ದೈತ್ಯದೇಹದ, ಬಹಳ ಶಕ್ತಿಶಾಲಿಯಾದ ಹುಲಿಯನ್ನು ಕೊಲ್ಲಲು ಸಾಧ್ಯವೇ ಎಂದು ನಮ್ಮ ಹಿರಿಯರು ಕೂಡ ಪ್ರಶ್ನೆ ಮಾಡಲಿಲ್ಲ, ಅಸತ್ಯವನ್ನೂ ಎಲ್ಲರೂ ಒಪ್ಪಿಕೊಂಡು ಬಂದು ಬಿಟ್ಟಿದ್ದಾರೆ. ಟಿಪ್ಪು ಹುಲಿಯನ್ನು ಕೊಂದಿದ್ದರೆ, ಆತ ರಣರಂಗದಲ್ಲಿ ಖಡ್ಗವಿಡಿದು ಹೋರಾಡಿ ಸಾಯಬೇಕಾಗಿತ್ತು. ಆದರೆ ಆತ ಬ್ರೀಟಿಷರಿಂದ ಹತನಾಗಿದ್ದ ಕೋಟೆಯ ಆವರಣದಲ್ಲಿ. ಅಲ್ಲದೇ ಆತ ದೇಶ ಪ್ರೇಮಿಯಾಗಿದ್ದರೆ, ಬ್ರೀಟಿಷರೊಂದಿಗೆ ರಣರಂಗದಲ್ಲಿ ಹೋರಾಡುತ್ತಿದ್ದ. ಆದರೆ ಆತ ಶೌರ್ಯನಲ್ಲದ ಕಾರಣ, ಪುಕ್ಕಲನಾದ ಟಿಪ್ಪು ಬ್ರೀಟಿಷರೊಂದಿಗೆ ಒಪ್ಪಂದ ಮಾಡಿಕೊಂಡಿದ್ದ. ಆತನ ಕ್ರೌರ್ಯ, ದೇಶವನ್ನು ಇಸ್ಲಾಮೀಕರಣ ಮಾಡುವ ಯತ್ನ, ಮತಾಂತರ ಮಾಡುತ್ತಿದ್ದು, ಅನ್ಯಧರ್ಮ ಅಸಹಿಷ್ಣುಯಾಗಿದ್ದರಿಂದ, ಆತನನ್ನು ಸೋಲಿಸಲೆಂದು ಎಲ್ಲರೂ ಬ್ರೀಟಿಷರೊಂದಿಗೆ ಸೇರಿ ಯುದ್ಧವನ್ನು ಮಾಡಿದರು ಎಂದು ತಿಳಿಸಿದರು.
ಟಿಪ್ಪು ಅನ್ಯಧರ್ಮದ ದ್ವೇಷಿಯಾಗಿದ್ದ ಎಂಬುದಕ್ಕೆ ಮೈಸೂರು ಮಹಾರಾಜರು ನಡೆಸಿಕೊಂಡು ಬಂದಿದ್ದ ದಸರಾವನ್ನು ನಿಲ್ಲಿಸಿದ್ದೇ ಸಾಕ್ಷಿಯಾಗಿದೆ. ತನ್ನ ಆಡಳಿತದಲ್ಲಿ ಪರ್ಶಿಯನ್ ಭಾಷೆಯನ್ನು ಜಾರಿಗೆ ತಂದಿದ್ದ. ಈಗಲೂ ಕೂಡ ಕಂದಾಯ ಇಲಾಖೆಯಲ್ಲಿ ಆ ಭಾಷೆ ಪದಗಳು ಚಾಲ್ತಿಯಲ್ಲಿವೆ. ಕನ್ನಡವನ್ನು ಕಗ್ಗೊಲೆ ಮಾಡಿದ್ದ ಟಿಪ್ಪು ಅದೇಗೆ ಕನ್ನಡ ಪ್ರೇಮಿಯಾಗುತ್ತೇನೆ,ಆತನೇನು ಮೈಸೂರಿನ ಮಹಾರಾಜರಂತೆ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾನಾ, ಶಾಸಕ ತನ್ವೀರ್ ಸೇಠ್ ಟಿಪ್ಪುವಿನ ಧರ್ಮಕ್ಕೆ ಸೇರಿದವರು. ಆದರೆ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್‌ರಿಗೆ ಏನಾಗಿದೆ. ಅವರಿಗೆ ಟಿಪ್ಪುವನ್ನು ಗುಣಗಾನ ಮಾಡುವ ಅನಿವಾರ್ಯತೆ ಏನಿದೆ ಎಂದು ವಾಗ್ದಾಳಿ ನಡೆಸಿದರು. ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಗುಂಬಾಜ್‌ನ್ನು ನಿರ್ಮಿಸಲಾಗಿದೆ. ಅದನ್ನು ತೆರವು ಮಾಡಲು ಸಂಬAಧಿಸಿದ ಅಧಿಕಾರಿಗಳಿಗೆ ಇನ್ನು ನಾಲ್ಕು ದಿನಗಳ ಗಡುವು ನೀಡಿದ್ದೇನೆ, ಅಷ್ಟರೊಳಗೆ ಅವರು ಅದನ್ನು ಒಡೆದು ಹಾಕದಿದ್ದರೆ, ನಾನೇ ಜೆಸಿಬಿ ತರಿಸಿ, ಒಡೆದು ಹಾಕಿಸುತ್ತೇನೆ ಎಂದು ಗುಡುಗಿದರು.