ಮುಸ್ಲೀಮರು ಎಂದಿಗೂ ಹಿಂದು ಮಹಿಳೆಯರ ಮಂಗಳಸೂತ್ರ ಕಸಿಯುವವರಲ್ಲ: ಫಾರೂಕ್ ಅಬ್ದುಲ್ಲಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನಮ್ಮ ಧರ್ಮದಲ್ಲಿ ಇತರ ಧರ್ಮವನ್ನು ಕೀಳಾಗಿ ಕಾಣುವಂತೆ ಎಲ್ಲಿಯೂ ಹೇಳಿಲ್ಲ. ಮುಸ್ಲೀಮರು ಎಂದಿಗೂ ಹಿಂದು ಮಹಿಳೆಯರ ಮಂಗಳಸೂತ್ರ ಕಸಿಯುವವರಲ್ಲ ಎಂದು ಪ್ರಧಾನಿ ಮೋದಿ ಅವರ ‘ಮಂಗಳಸೂತ್ರ’ ಹೇಳಿಕೆಗೆ ನ್ಯಾಷನಲ್ ಕಾನ್ಫರೆನ್ಸ್‌ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು ಪ್ರತಿಕ್ರಿಯಿಸಿದ್ದಾರೆ.

ನಮ್ಮ ಪ್ರಧಾನಿ ಇಂಥ ಕೀಳುಮಟ್ಟದ ಹೇಳಿಕೆ ನೀಡಿರುವುದು ದುರದೃಷ್ಟಕರ. ಎಲ್ಲಾ ಧರ್ಮದವರನ್ನು ಸಮಾನವಾಗಿ ಕಾಣುವಂತೆ ನಮ್ಮ ಧರ್ಮ ಹೇಳಿದೆ. ಯಾವುದೇ ಇತರ ಧರ್ಮವನ್ನು ಕೀಳಾಗಿ ಕಾಣುವಂತೆ ಇಸ್ಲಾಂನಲ್ಲಿ ಎಲ್ಲಿಯೂ ಹೇಳಿಲ್ಲ. ನಮ್ಮ ಧರ್ಮದ ಮೇಲೆ ನಾವು ನಂಬಿಕೆ ಇಟ್ಟಂತೆಯೇ ಇತರ ಧರ್ಮದವರನ್ನೂ ಕಾಣುವಂತೆ ಬೋಧಿಸಿದೆ ಎಂದಿದ್ದಾರೆ.
ಹಿಂದು ಧರ್ಮದ ತಾಯಿ ಅಥವಾ ಸೋದರಿಯ ಮಂಗಳಸೂತ್ರ ಕಸಿದ ಎಂದರೆ ಆ ವ್ಯಕ್ತಿ ಮುಸಲ್ಮಾನನೇ ಅಲ್ಲ ಹಾಗೂ ಆತ ಇಸ್ಲಾಂ ಧರ್ಮವನ್ನೇ ಅರ್ಥ ಮಾಡಿಕೊಂಡಿಲ್ಲ ಎಂದರ್ಥ ಎಂದರು.

ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ಹತ್ಯೆ ಮಾಡಿದರೆ, ಆತ ಆ ವ್ಯಕ್ತಿಯನ್ನು ಮಾತ್ರವಲ್ಲ, ಇಡೀ ಮನುಕುಲವನ್ನು ಕೊಲೆಗೈದ ಎಂದು ಇಸ್ಲಾಂ ಹೇಳುತ್ತದೆ. ಹಿಂದುಗಳನ್ನು ದ್ವೇಷಿಸಬೇಕೆಂದು ಇಸ್ಲಾಂ ಎಲ್ಲಿಯೂ ಹೇಳಿಲ್ಲ. ಮುಸ್ಲಿಂ ಮತ್ತು ಸಿಖ್‌ ಬಾಂಧವರನ್ನು ಪ್ರೀತಿಸಿದಷ್ಟೇ ಹಿಂದುಗಳನ್ನೂ ನಾನು ಪ್ರೀತಿಸುತ್ತೇನೆ. ಎಲ್ಲರ ಏಳಿಗೆ ದೇಶದ ಏಳಿಗೆ ಇದ್ದಂತೆ’ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!