ನೋಡಲೇಬೇಕೆನಿಸುವ ಸ್ಥಳಗಳಿವು: ಪ್ರಕೃತಿಯ ಸೊಬಗನ್ನು ಆನಂದಿಸಿದವನೇ ಧನ್ಯ!

ತ್ರಿವೇಣಿ ಗಂಗಾಧರಪ್ಪ

ಪ್ರಕೃತಿ ನೈಸರ್ಗಿಕ ಸೌಂದರ್ಯದ ನೆಲೆ. ರಮಣೀಯ ಪರ್ವತ ಶ್ರೇಣಿಗಳು, ದಟ್ಟ ಹಸಿರಿನಿಂದ ಕೂಡಿದ ವನಸಿರಿ, ಸುಶ್ರಾವ್ಯವಾಗಿ ಧರೆಗುರುಳುವ ಜಲಪಾತಗಳು, ಮನಸ್ಸಿಗೆ ಪ್ರಸನ್ನತೆ ಕರುಣಿಸುವ ದಟ್ಟಾರಣ್ಯಗಳು, ಉತ್ಸಾಹ ಹೆಚ್ಚಿಸುವ ಕಡಲ ತೀರಗಳು, ಸುಂದರ ನದಿಗಳಿಂದ ಹಿಡಿದು ಪ್ರಕೃತಿಯ ಒಡಲಲ್ಲಿನ ವಿಸ್ಮಯಕ್ಕೆ ತಲೆತೂಗದವರಿಲ್ಲ. ಹೀಗೆ ಹೇಳುವುದಾದರೆ ಪ್ರತಿಯೊಂದು ಪ್ರದೇಶಕ್ಕೂ ತನ್ನದೇ ಆದ ವಿಶೇಷತೆ ಇರುತ್ತದೆ.

ವಿಶಾಖಪಟ್ಟಣ: ಈ ನಗರವು ಹೈದರಾಬಾದ್‌ನಿಂದ 602 ಕಿಮೀ ದೂರದಲ್ಲಿದೆ. ಇದನ್ನು ವೈಜಾಗ್ ಎಂತಲೂ ಕರೆಯುತ್ತಾರೆ. ವಿಶಾಖಪಟ್ಟಣಂ ಆಂಧ್ರಪ್ರದೇಶ ರಾಜ್ಯದ ಅತಿದೊಡ್ಡ ಕರಾವಳಿ ಮತ್ತು ಬಂದರು ನಗರ ಎಂದು ಗುರುತಿಸಲ್ಪಟ್ಟಿದೆ. ಭಾರತೀಯ ನೌಕಾಪಡೆಗೆ ಸೇರಿದ್ದು, ವಿಶಾಖಪಟ್ಟಣವು ಪೂರ್ವ ನೌಕಾ ಕಮಾಂಡ್‌ನ ಪ್ರಧಾನ ಕಛೇರಿಯಾಗಿದೆ.

ವಿಶಾಖಪಟ್ಟಣವು ಪೂರ್ವ ಘಟ್ಟಗಳ ಪರ್ವತಗಳ ನಡುವೆ ಬಂಗಾಳ ಕೊಲ್ಲಿಯ ಮೇಲಿರುವ ಸುಂದರವಾದ ನಗರವಾಗಿದೆ. ಈ ಪ್ರದೇಶವನ್ನು ಕುಲೋತ್ತುಂಗ ಚೋಳರು ಕ್ರಿ.ಶ. 11, 12ನೇ ಶತಮಾನದಲ್ಲಿ ನಿರ್ಮಿಸಿದರೆಂಬ ಇತಿಹಾಸವಿದೆ. ಕೈಲಾಸಗಿರಿ, ರಾಮಕೃಷ್ಣ ಬೀಚ್, ಋಷಿಕೊಂಡ ಬೀಚ್, ಯರಾದ ಬೀಚ್, ಭೀಮಿಲಿ, ವುಡಾ ಪಾರ್ಕ್, ವಿಶಾಖಾ ಮ್ಯೂಸಿಯಂ, ಮೃಗಾಲಯದಂತಹ ಅನೇಕ ಪ್ರವಾಸಿ ಸ್ಥಳಗಳು ವಿಶಾಖಪಟ್ಟಣಂನ ಪ್ರಮುಖ ಆಕರ್ಷಣೆಗಳಾಗಿವೆ.

విశాఖపట్నం

ಅರಕು: ಅರಕು ಕಣಿವೆಯು ವಿಶಾಖಪಟ್ಟಣದಿಂದ 112 ಕಿಮೀ ದೂರದಲ್ಲಿದೆ. ಇದು ಆಂಧ್ರಪ್ರದೇಶ ರಾಜ್ಯದ ವಿಶಾಖ ಜಿಲ್ಲೆಯಲ್ಲಿರುವ ಅದ್ಭುತವಾದ ಗಿರಿಧಾಮವಾಗಿದೆ. ಇದನ್ನು ಆಂಧ್ರದ ಊಟಿ ಎಂದೂ ಕರೆಯುತ್ತಾರೆ. ಅರಕು, ಪ್ರಯಾಣದಿಂದ ಹಿಡಿದು ಪ್ರವಾಸೋದ್ಯಮದವರೆಗೆ ಎಲ್ಲವೂ ವಿಶೇಷವಾಗಿದೆ.

ಹೆಚ್ಚಿನ ಆದಿವಾಸಿಗಳು ಅರಕು ಕಣಿವೆಯಲ್ಲಿ ಸಮುದ್ರ ಮಟ್ಟದಿಂದ 900 ರಿಂದ 1400 ಮೀಟರ್ ಎತ್ತರದಲ್ಲಿ ವಾಸಿಸುತ್ತಿದ್ದಾರೆ. ಕಾಫಿ ತೋಟಗಳ ಸೌಂದರ್ಯ, ಶಾಂತಿಯುತ ವಾತಾವರಣ, ಸುಂದರ ಜಲಪಾತಗಳು ಮತ್ತು ಹಸಿರು ಪ್ರಕೃತಿಯನ್ನು ಪ್ರತಿಬಿಂಬಿಸುತ್ತದೆ.

వింటర్ సీజన్ లో వహ్వా అనిపించే అరకు లోయ అందాలు !! | Places Visit Near Araku  Valley - Telugu Nativeplanet

ಶ್ರೀಶೈಲ: ಭಾರತದ 12 ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಒಂದಾದ ಶ್ರೀಶೈಲವು ಆಂಧ್ರಪ್ರದೇಶ ರಾಜ್ಯದ ಕರ್ನೂಲ್ ಜಿಲ್ಲೆಯಲ್ಲಿದೆ.

ಅಷ್ಟಾದಶ ಶಕ್ತಿ ಪೀಠಗಳಲ್ಲಿ ಒಂದಾದ ಭ್ರಮರಾಂಬಿಕಾ ದೇವಿಯ ಸಮೇತ ಶ್ರೀಶೈಲ ಮಲ್ಲಣ್ಣ ಇಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದ್ದಾನೆ. ಶ್ರೀಶೈಲಂ ಅಣೆಕಟ್ಟು, ಅಕ್ಕಮಹಾದೇವಿ ಗುಹೆಗಳು, ಇಷ್ಟಕಾಮೇಶ್ವರಿ ದರ್ಶನ, ಶಿಖರ, ಹಾಟಕೇಶ್ವರಂ, ಸಾಕ್ಷಿ ಗಣಪತಿ, ಪಾಲಧಾರ, ಪಂಚಧಾರಾ ಹಲವಾರು ಸ್ಥಳಗಳು ಪ್ರವಾಸಿಗರು ಭೇಟಿ ನೀಡಲೇಬೇಕಾದ ಸ್ಥಳಗಳಾಗಿವೆ. ಮಲ್ಲಿಕಾರ್ಜುನ ದರ್ಶನದ ನಂತರ ಶ್ರೀಶೈಲದ ಈ ಸ್ಥಳಗಳ ಪ್ರವಾಸವು ತುಂಬಾ ರೋಮಾಂಚನಕಾರಿಯಾಗಿದೆ.

శ్రీశైలం

ಪಾಪಿಕೊಂಡಲು: ಗೋದಾವರಿ ನದಿಯೊಂದಿಗೆ ಬೆಸೆದುಕೊಂಡಂತೆ ಕಾಣುವ ಪಾಪಿಕೊಂಡಗಳ ಸೌಂದರ್ಯಕ್ಕೆ ಪ್ರವಾಸಿಗರು ಮೈಮರೆಯಲೇಬೇಕು. ಪೂರ್ವ ಗೋದಾವರಿ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳು ಪಾಪಿಕೊಂಡಗಳು ಗೋದಾವರಿ ನದಿಗೆ ಅಡ್ಡಲಾಗಿ ಹರಡಿರುವ ಮೂರು ಬೆಟ್ಟಗಳ ಗುಂಪು. ದಟ್ಟ ಕಾಡುಗಳ ನಡುವೆ ಸಂರಕ್ಷಿತ ರಾಷ್ಟ್ರೀಯ ಉದ್ಯಾನವನವಾಗಿ ಪಾಪಿಕೊಂಡಗಳಿವೆ.

ಇದರ ಮೂಲ ಹೆಸರು ‘ಪಾಪಿಡಿ ಕೊಂಡಲು’. ಬೇರೆ ಮಾಡುವ ಅರ್ಥವನ್ನು ತೆಲುಗಿನಲ್ಲಿ ಪಾಪಿಡಿ ಎಂದು ಕರೆಯುತ್ತಾರೆ. ಹಾಗಾಗಿಯೇ ಗೋದಾವರಿ ಬೇರ್ಪಡುವ ಈ ಜಾಗವನ್ನು ಪಾಪಿಡಿ ಬೆಟ್ಟ ಎಂದು ಕರೆಯುತ್ತಾರೆ. ರಾಮಾಯಣದಲ್ಲಿ, ಸೀತಾರಾಮ ತಮ್ಮ ವನವಾಸದ ಸಮಯದಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಿದ್ದರು ಎಂದು ಹೇಳಲಾಗುತ್ತದೆ. ರಾಜಮಂಡ್ರಿಯಿಂದ ಪಾಪಿಕೊಂಡವನ್ನು ದೋಣಿಯ ಮೂಲಕ ತಲುಪುವುದು ಮರೆಯಲಾಗದ ಅನುಭವ.

ಪರ್ವತಗಳ ಸೌಂದರ್ಯವನ್ನು ಸವಿಯುವುದರೊಂದಿಗೆ ಕಣಿವೆಗಳು, ಜಲಪಾತಗಳು, ಕ್ಯಾಂಪಿಂಗ್, ಟ್ರೆಕ್ಕಿಂಗ್ ಮುಂತಾದ ಆಕರ್ಷಣೆಗಳನ್ನು ಇಲ್ಲಿ ಅನುಭವಿಸಬಹುದು. ದಾರಿಯುದ್ದಕ್ಕೂ ಕಂಡುಬರುವ ಅನೇಕ ಬುಡಕಟ್ಟು ಜನರು, ದೋಣಿ ನಿಲುಗಡೆ ಸಮಯದಲ್ಲಿ ಅವರೊಂದಿಗೆ ಸಂಭಾಷಣೆಗಳು ಮತ್ತು ಮಾರಾಟಕ್ಕೆ ತರುವ ಕರಕುಶಲ ವಸ್ತುಗಳು ಅದ್ಬುತ.

పాపికొండలు సందర్శనకు కొత్త టూర్‌ ప్యాకేజీ.. ప్రకటించిన టూరిజం  డిపార్ట్​మెంట్​ | Prabha News

ರಾಜಮಂಡ್ರಿ: ಗೋದಾವರಿ ನದಿಯ ಸೌಂದರ್ಯದಿಂದ ಹೊಳೆಯುವ ಈ ಪಟ್ಟಣವನ್ನು ರಾಜಮಹೇಂದ್ರವರಂ ಎಂದೂ ಕರೆಯುತ್ತಾರೆ. ರಾಜಮಂಡ್ರಿಯು ಆಂಧ್ರಪ್ರದೇಶ ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮತ್ತು ಜನಪ್ರಿಯ ಪ್ರವಾಸಿ ತಾಣವಾಗಿ ವಿಶೇಷ ಮನ್ನಣೆಯನ್ನು ಹೊಂದಿದೆ. ತೆಲುಗು ಭಾಷೆಯ ಬೆಳವಣಿಗೆಗೆ ಶ್ರಮಿಸಿದ ಆದಿಕವಿ ನನ್ನಯ್ಯನವರ ಜನ್ಮಭೂಮಿ ಇದು.

ಭಾರತದ ಪ್ರಾಚೀನ ನಗರಗಳಲ್ಲಿ ರಾಜಮಂಡ್ರಿ ಕೂಡ ಒಂದು. ಪೂರ್ವ ಚಾಲುಕ್ಯರು ಹಿಂದೆ ಈ ಪ್ರದೇಶವನ್ನು ಆಳಿದರು. 11 ನೇ ಶತಮಾನದಲ್ಲಿ ಚಾಲುಕ್ಯ ರಾಜ ರಾಜರಾಜ ನರೇಂದ್ರನ ಆಳ್ವಿಕೆಯಲ್ಲಿ ಈ ನಗರವನ್ನು ಸ್ಥಾಪಿಸಲಾಯಿತು ಎಂದು ಹೇಳಲಾಗುತ್ತದೆ. 1823 ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಗಿದ್ದಾಗ ರಾಜಮಂಡ್ರಿ ಜಿಲ್ಲೆಯಾಯಿತು.

రాజమండ్రి

ಅನಂತಗಿರಿ: ಪ್ರವಾಸಿ ಕೇಂದ್ರವು ಅರಕುದಿಂದ 26 ಕಿಮೀ, ದೂರದಲ್ಲಿದೆ. ಇದು ವಿಶಾಖಪಟ್ಟಣಂ ಮತ್ತು ಅರಕು ಕಣಿವೆಯ ನಡುವಿನ ಸುಂದರವಾದ ಗಿರಿಧಾಮ. ಅನಂತಗಿರಿಯು ಸಮುದ್ರ ಮಟ್ಟದಿಂದ 1168 ಮೀಟರ್ ಎತ್ತರದಲ್ಲಿ ವಿಶಾಲವಾದ ಕಾಫಿ ತೋಟಗಳು ಮತ್ತು ಜಲಪಾತಗಳ ನಡುವೆ ನೆಲೆಗೊಂಡಿದೆ. ಇಲ್ಲಿನ ವ್ಯೂ ಪಾಯಿಂಟ್‌ನಿಂದ ಕಣಿವೆಗಳ ನೋಟಗಳು ಬಹಳ ಆಕರ್ಷಕವಾಗಿವೆ. ಅನಂತಗಿರಿಯನ್ನು ರೈಲು ಮತ್ತು ರಸ್ತೆಯ ಮೂಲಕ ತಲುಪಬಹುದು. ಅನಂತಗಿರಿ ರೈಲು ನಿಲ್ದಾಣವು ಬೊರ್ರಾ ಗುಹೆಗಳಿಂದ 9 ಕಿಮೀ ದೂರದಲ್ಲಿದೆ.

ಸೂರ್ಯೋದಯ, ಸೂರ್ಯಾಸ್ತ, ದಟ್ಟವಾದ ಕಾಡುಗಳು, ಪರ್ವತ ಶ್ರೇಣಿಗಳು ಮತ್ತು ಪ್ರಕೃತಿ ಸೌಂದರ್ಯವನ್ನು ನೋಡುತ್ತಾ ವೈಜಾಗ್-ಅನಂತಗಿರಿ ನಡುವಿನ ಇಡೀ ದಿನದ ಪ್ರಯಾಣವು ಆರಾಮವಾಗಿ ಸಾಗುತ್ತದೆ.

అనంతగిరి బొర్రా గుహలు

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!