ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮಸ್ಟರಿಂಗ್ ಕಾರ್ಯಾರಂಭ

ಹೊಸದಿಗಂತ ವರದಿ ಕೊಪ್ಪಳ:

ಪೂರ್ವ ನಿಗದಿಯಂತೆ ಮೇ 09ರಂದು ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮೇ 09ರಂದು ಬೆಳಗ್ಗೆಯಿಂದಲೇ ಮಸ್ಟರಿಂಗ್ ಕಾರ್ಯ ಆರಂಭಗೊಂಡಿದೆ.
ಕೊಪ್ಪಳ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಕಾರ್ಯವು ನಗರದ ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಆರಂಭಗೊಂಡಿದೆ. ಮತಗಟ್ಟೆಗೆ ನಿಯೋಜನೆಗೊಂಡ ಪಿಆರ್ ಓ, ಎಪಿಆರ್ ಓ, ಪಿಓಗಳು ಬೆಳಗ್ಗೆಯಿಂದಲೇ ಶ್ರೀ ಗವಿಮಠದ ಆವರಣದತ್ತ ಆಗಮಿಸುವ ದೃಶ್ಯಗಳು ಕಂಡು ಬಂದವು.

ಆಯಾ ಮತಗಟ್ಟೆಗೆ ತೆರಳಬೇಕಾದ ಬಸ್ ಗಳು, ಮಿನಿ ಬಸ್ ಗಳು ಮತ್ತು ಕ್ರೂಷರಗಳು ಸಹ ಆವರಣಕ್ಕೆ ಬಂದು, ಮತಗಟ್ಟೆಗೆ ನಿಯೋಜನೆಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕರೆದೊಯ್ಯಲು
ಸಾಲಾಗಿ ನಿಂತಿದ್ದವು.

ಮತಗಟ್ಟೆ ಸಂಖ್ಯೆ, ಮತಗಟ್ಟೆ ಹೆಸರು, ಮತದಾನ ಕೇಂದ್ರ ಕಟ್ಟಡದ ವಿಳಾಸ, ವಾಹನ ತಂಗುವ ಸ್ಥಳ ‌ರೂಟ್ ತೋರಿಸುವ ಅಧಿಕಾರಿಯ ಸ್ಟೀಕರನೊಂದಿಗೆ ವಾಹನಗಳ ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಪೊಲಿಂಗ್ ಪಾರ್ಟಿ ನಂಬರ್, ಪೊಲಿಂಗ್‌ ಸ್ಟೇಷನ್ ಅಲಾಟೆಡ್ ನಂಬರ್ ಮತ್ತು ಪೊಲಿಂಗ್ ಸ್ಟೇಷನ್ ವಿಳಾಸವನ್ನು ಹುಡುಕಿಕೊಂಡು ತಮ್ಮ ತಮ್ಮ ಮತಗಟ್ಟೆಗೆ ತೆರಳಲು ಅಧಿಕಾರಿಗಳು ಮತ್ತು ಸಿಬ್ಬಂದಿ ಸಿದ್ಧತೆ ಮಾಡಿಕೊಳ್ಳುವುದು ಕಂಡು ಬಂದಿತು.

ಉಪಹಾರದ ವ್ಯವಸ್ಥೆ: ಜಿಲ್ಲಾ ಚುನಾವಣಾಧಿಕಾರಿಗಳ ನಿರ್ದೇಶನದಂತೆ ಮತಗಟ್ಟೆಗೆ ನಿಯೋಜನೆಗೊಂಡ ಸಿಬ್ಬಂದಿಗೆ ಕೂಡಲು ಅಚ್ಚುಕಟ್ಟಾದ‌ ಶ್ಯಾಮಿಯಾನ್ ವ್ಯವಸ್ಥೆ, ಉಪಹಾರ‌ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!